ಬೇಹುಗಾರಿಕೆ: ಒಮರ್ ಅಬ್ದುಲ್ಲಾ ಆರೋಪ ತಳ್ಳಿಹಾಕಿದ ಡಿಸಿಎಂ

ಶನಿವಾರ, 5 ಸೆಪ್ಟಂಬರ್ 2015 (19:39 IST)
ಜಮ್ಮು ಕಾಶ್ಮಿರ ಸರಕಾರ ನನ್ನ ವಿರುದ್ಧ ಬೇಹುಗಾರಿಕೆ ನಡೆಸುತ್ತಿದೆ ಎನ್ನುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರೋಪಗಳನ್ನು ತಳ್ಳಿಹಾಕಿದ ಸರಕಾರ ಕೇವಲ ಆರೋಪ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.
 
ಒಮರ್ ಬಹುತೇಕ ಪ್ರತಿದಿನ ಟ್ವೀಟ್ ಮಾಡುತ್ತಿರುತ್ತಾರೆ. ಅವರಿಗೆ ಯಾವುದೇ ವಿಷಯ ಸಿಗದಿದ್ದಾಗ ಇಂತಹ ಆರೋಪಗಳ ಬಗ್ಗೆ ಟ್ವೀಟ್ ಮಾಡುತ್ತಾರೆ. ಸರಕಾರ ಯಾಕೆ ಅವರ ವಿರುದ್ಧ ಬೇಹುಗಾರಿಕೆ ನಡೆಸುತ್ತದೆ ಎಂದು ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಪ್ರಶ್ನಿಸಿದ್ದಾರೆ.
 
ಜಮ್ಮು ಕಾಶ್ಮಿರದಲ್ಲಿರುವ ಸರಕಾರ ಸ್ಥಿರವಾಗಿದ್ದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಬ್ದುಲ್ಲಾ ಅವರಿಂದ ಸರಕಾರಕ್ಕೆ ಯಾವುದೇ ಬೆದರಿಕೆಯಿಲ್ಲದಿರುವಾಗ ಬೇಹುಗಾರಿಕೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
 
ರಾಜಕಾರಣಿಗಳ ನಿವಾಸಗಳ ಮುಂದೆ ರಕ್ಷಣೆಗಾಗಿ ಭದ್ರತಾ ಪಡೆಗಳಿರುವುದು ಸಾಮಾನ್ಯ ಸಂಗತಿಯಾಗಿದೆ ಎಂದರು.
 
ನನ್ನ ಮನೆಯ ಮುಂದೆ ಇತರ ರಾಜಕಾರಣಿಗಳ ಮನೆಯ ಮುಂದೆ ರಕ್ಷಣೆಗಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತದೆ ಕೇವ ಲ ಒಬ್ಬ ಭದ್ರತಾ ಅಧಿಕಾರಿ ಪತ್ರಕರ್ತನನ್ನು ತಡೆದಿದ್ದಾರೆ ಎನ್ನುವ ಕಾರಣಕ್ಕೆ ಬೇಹುಗಾರಿಕೆ ಮಾಡುತ್ತಿದ್ದಾರೆ ಎಂದರ್ಥವಲ್ಲ ಎಂದು ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಗುಡುಗಿದ್ದಾರೆ.
 

ವೆಬ್ದುನಿಯಾವನ್ನು ಓದಿ