ಯಾಕೂಬ್ ಮೆಮನ್‌ಗೆ ಗಲ್ಲು: ಪ್ರತಿಭಟನೆಯಲ್ಲಿ ಭಾಗಿಯಾದ ಜಮ್ಮು ಕಾಶ್ಮಿರ ಶಾಸಕ ರಷೀದ್ ಬಂಧನ

ಗುರುವಾರ, 30 ಜುಲೈ 2015 (15:35 IST)
ಉಗ್ರ ಯಾಕೂಬ್ ಮೆಮನ್‌ಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಸ್ವತಂತ್ರ ಶಾಸಕ ರಷೀದ್ ತಮ್ಮ ಬೆಂಬಲಿಗರೊಂದಿಗೆ ಲಾಲ್‌ಚೌಕ್ ಬಳಿಯಿರುವ ಕ್ಲಾಕ್ ಟವರ್‌ನಲ್ಲಿ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  
 
ಉತ್ತರ ಕಾಶ್ಮಿರದ ಲಾನ್‌ಗೇಟ್ ವಿಧಾನಸಭೆ ಕ್ಷೇತ್ರದ ಶಾಸಕರಾದ ಶೇಕ್ ಅಬ್ದುಲ್ ರಷೀದ್, 1993ರ ಮುಂಬೈ ಸ್ಫೋಟದ ಆರೋಪಿ  ಮೆಮನ್‌ಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. 
 
ಶಾಸಕ ರಷೀದ್ ಮತ್ತು ಅವರ ಬೆಂಬಲಿಗರನ್ನು ಕೋಠಿ ಬಾಗ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ವಿಶ್ವದಲ್ಲಿ ಗಲ್ಲಿಗೇರಿಸುವುದನ್ನು ನಿಷೇಧಿಸಬೇಕು. ಇಂತಹ ಕಪ್ಪು, ಅಂಧ ಮತ್ತು ಮೂಕವಾಗಿರುವ ಕಾನೂನನ್ನು ತೆಗೆದುಹಾಕಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ರಷೀದ್ ಮೆರವಣಿಗೆಯಲ್ಲಿ ತೆರಳಿದರು.
 
ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಆರೋಪಿಗಳಿಗೆ ಯಾಕೆ ಇಲ್ಲಿಯವರೆಗೆ ಗಲ್ಲು ಶಿಕ್ಷೆ ನೀಡಿಲ್ಲ.ಮೆಮನ್‌ಗೆ ಯಾಕೆ ಗಲ್ಲು ಶಿಕ್ಷೆ ನೀಡಲಾಯಿತು ಎಂದು ಶಾಸಕ ರಷೀದ್ ಪ್ರಶ್ನಿಸಿದರು.   
 
ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯವರೆ, ರಾಜೀವ್ ಗಾಂಧಿ, ಬಿಯಾಂತ್ ಸಿಂಗ್ ಹಂತಕರಿಗೆ ಯಾಕೆ ಗಲ್ಲು ಶಿಕ್ಷೆಯಾಗಿಲ್ಲ. ನಾವು ಅವರನ್ನು ಗಲ್ಲಿಗೇರಿಸುವಂತೆ ಒತ್ತಾಯ ಮಾಡುತ್ತಿಲ್ಲ. ಕಾಶ್ಮಿರದ ಜನತೆ ಗಲ್ಲಿಗೇರಿಸುವುದನ್ನು ವಿರೋಧಿಸುತ್ತಾರೆ. ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರು ಮೃತ ದೇಹವನ್ನು ಕೂಡಾ ಕುಟುಂಬದ ಸದಸ್ಯರಿಗೆ ಯಾಕೆ ಒಪ್ಪಿಸಿಲ್ಲ ಎನ್ನುವುದಕ್ಕೆ ಉತ್ತರ ನೀಡಿ ಎಂದು ಶಾಸಕ ರಷೀದ್ ಒತ್ತಾಯಿಸಿದ್ದಾರೆ.   
 

ವೆಬ್ದುನಿಯಾವನ್ನು ಓದಿ