ಬೀಫ್ ಪಾರ್ಟಿ ಆಯೋಜಿಸಿದ ಆರೋಪ: ವಿಧಾನಸಭೆಯಲ್ಲೇ ಮಾರಾಮಾರಿ

ಗುರುವಾರ, 8 ಅಕ್ಟೋಬರ್ 2015 (11:24 IST)
ಗೋಮಾಂಸ ವಿಚಾರ ಜಮ್ಮು ಕಾಶ್ಮೀರದ ವಿಧಾನಸಭೆ ಅಧಿವೇಶನವನ್ನು ಇಂದು ಅಕ್ಷರಶ: ರಣರಂಗವಾಗಿಸಿದೆ. ಬೀಫ್ ಪಾರ್ಟಿ ನೀಡಿದ್ದಾರೆಂದು ಆರೋಪಿಸಿ ಪಕ್ಷೇತರ ಶಾಸಕರೊಬ್ಬರನ್ನು ಬಿಜೆಪಿ ಶಾಸಕರೊಬ್ಬರು ವಿಧಾನಸಭೆಯಲ್ಲಿಯೇ ಹಲ್ಲೆ ನಡೆಸಿದ್ದಾರೆ. 

ಪಕ್ಷೇತರ ಶಾಸಕ ಎಂಜಿನಿಯರ್ ರಶೀದ್‌ ಬೀಫ್ ಪಾರ್ಟಿ ನಡೆಸಿದ್ದರೆಂದು ಆರೋಪಿ ಪ್ರಾರಂಭವಾದ ಮಾತಿನ ಚಕಮಕಿ ಮುಂದುವರೆದು ಕೈ ಕೈ ಮಿಲಾಯಿಸಿ ಹೊಡೆದಾಡುವಷ್ಟು ಮುಂದುವರೆಯಿತು. ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಬಿಜೆಪಿ ಶಾಸಕ ರವೀಂದ್ರ ರೈನಾ ಮತ್ತಿತರರು ರಶೀದ್ ಅವರನ್ನು ಥಳಿಸಿದ್ದಾರೆ. 
 
ಘಟನೆಯನ್ನು ಖಂಡಿಸಿ ನ್ಯಾಷನಲ್ ಕಾನ್ಫರೆನ್ಸ್‌ ಶಾಸಕರು ಸದನದ ಕಲಾಪ ಬಹಿಷ್ಕರಿಸಿ ಹೊರ ಹೋಗಿದ್ದಾರೆ. ಘಟನೆ ಕುರಿತು ವಿರೋಧ ವ್ಯಕ್ತ ಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, "ವಿಧಾನಸಭೆಯಲ್ಲಿ ಹಲ್ಲೆ ಮಾಡಲು ಬರುವುದಲ್ಲ. ತಪ್ಪು ಮಾಡಿದ್ದರೆ ಚರ್ಚೆಯಾಗಲಿ. ಅದನ್ನು ಬಿಟ್ಟು ಹಲ್ಲೆ ನಡೆಸುವುದು ತಪ್ಪು", ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ