ಜಮ್ಮು ಕಾಶ್ಮಿರ, ಜಾರ್ಖಂಡ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

ಶನಿವಾರ, 25 ಅಕ್ಟೋಬರ್ 2014 (16:38 IST)
ಜಮ್ಮು ಕಾಶ್ಮಿರ, ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ನವೆಂಬರ್ 25 ರಿಂದ ಡಿಸೆಂಬರ್ 20 ರವರೆಗೆ 5 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣೆ ಆಯೋಗ ಪ್ರಕಟಿಸಿದೆ. 
 
ದೆಹಲಿಯಲ್ಲಿ ಕೇಂದ್ರ ಚುನಾವಣೆ ಆಯೋಗ ಸುದ್ದಿಗೋಷ್ಠಿ ನಡೆಸಿ, ಉಭಯ ರಾಜ್ಯಗಳಲ್ಲಿ 5 ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 23 ರಂದು ಎರಡು ರಾಜ್ಯಗಳಲ್ಲಿ ಮತ ಏಣಿಕೆ ನಡೆಯಲಿದೆ ಎಂದು ತಿಳಿಸಿದೆ 
 
ನವೆಂಬರ್ 25 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 2 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 9 ರಂದು ಮೂರನೇ ಹಂತದ ಮತದಾನ, ಡಿಸೆಂಬರ್ 14 ರಂದು ನಾಲ್ಕನೇ ಹಂತದ ಮತದಾನ, ಡಿಸೆಂಬರ್ 20 ರಂದು ಐದನೇ ಹಂತದ ಮತದಾನ ನಡೆಯಲಿದೆ ಎಂದು ಆಯೋಗ ವಿವರಣೆ ನೀಡಿದೆ.
 
 
ನವೆಂಬರ್ 5 ರಿಂದ ನಾಮಪತ್ರ ಸಲ್ಲಿಕೆ ಆರಂಭ. ನವೆಂಬರ್ 7 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ನಾಮಪತ್ರ ಹಿಂಪಡೆಯಲು ನವೆಂಬರ್ 10 ರಂದು ಕೊನೆಯ ದಿನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. 
 
ಜಮ್ಮು ಕಾಶ್ಮಿರದಲ್ಲಿ 10015 ಮತಗಟ್ಟೆಗಳನ್ನು ಸ್ಥಾಪಿಸಿಲಾಗುವುದು, ಜಾರ್ಖಂಡ್‌ನಲ್ಲಿ 24648 ಮತಗಟ್ಟೆಗಳಿವೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ