ಮೋದಿ ಸಂಪುಟದ ಇಬ್ಬರ ಸಚಿವರ ನಡುವೆ ಜಟಾಪಟಿ

ಗುರುವಾರ, 9 ಜೂನ್ 2016 (17:02 IST)
ವನ್ಯ ಮೃಗಗಳ ಹತ್ಯೆಗೆ ಆದೇಶ ನೀಡಿದ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮೇನಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
 
 ವನ್ಯಮೃಗಗಳ ಹತ್ಯೆ ಮಾಡಲು ರಾಜ್ಯ ಸರಕಾರಗಳಿಗೆ ಅನುಮತಿ ನೀಡಿದ ಸಚಿವ ಜಾವ್ಡೇಕರ್ ಕ್ರಮ ತೀವ್ರ ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಪರಿಸರ ಖಾತೆ ಸಚಿವ ಜಾವ್ಡೇಕರ್, ಬಂಗಾಳದಲ್ಲಿ ಆನೆಗಳನ್ನು ಕೊಲ್ಲಲು, ಹಿಮಾಚಲ ಪ್ರದೇಶದಲ್ಲಿ ಮಂಗಗಳ ಹತ್ಯೆ, ಗೋವಾದಲ್ಲಿ ನವಿಲುಗಳನ್ನು ಹತ್ಯೆ ಮಾಡಲು ಆದೇಶ ನೀಡಿದ್ದಾರೆ. ಈಗಾಗಲೇ ನೂರಾರು ಮೃಗಗಳ ಹತ್ಯೆಯ ಮಾರಣಹೋಮ ನಡೆದಿದೆ ಎಂದು ಕಿಡಿಕಾರಿದರು.
 
ಪ್ರಾಣಿ ಹಕ್ಕು ಕಾರ್ಯಕರ್ತೆಯಾದ ಸಚಿವೆ ಮೇನಕಾ ಗಾಂಧಿ ಮಾತನಾಡಿ, ಮುಗ್ದ ಪ್ರಾಣಿಗಳ ಹತ್ಯೆಯಿಂದ ಯಾವ ಲಾಭವಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ. 
 
ಪರಿಸರ ಖಾತೆ ಸಚಿವ ಜಾವ್ಡೇಕರ್,  ಬೆಳೆಹಾನಿ, ಆಸ್ತಿ ಮತ್ತು ಜನರ ಜೀವ ರಕ್ಷಿಸಲು ಬಂಗಾಳದಲ್ಲಿ ಆನೆಗಳನ್ನು ಕೊಲ್ಲಲು, ಹಿಮಾಚಲ ಪ್ರದೇಶದಲ್ಲಿ ಮಂಗಗಳ ಹತ್ಯೆ, ಗೋವಾದಲ್ಲಿ ನವಿಲುಗಳನ್ನು ಹತ್ಯೆ ಮಾಡಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ