ಜಯಲಲಿತಾ ಆಪ್ತೆ ಶಶಿಕಲಾ ಗಂಡನ ಬಂಧನ

ಮಂಗಳವಾರ, 8 ಜುಲೈ 2014 (16:43 IST)
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅಪ್ತೆ ಶಶಿಕಲಾ ಪತಿ ಎನ್. ನಟರಾಜನ್ ಅವರನ್ನು ತಿರುವನ್ನಾವಲ್ಲಿಯ ಕೋರ್ತಲ್ಲಮ್ ಎಂಬಲ್ಲಿ ಬಂಧಿಸಲಾಗಿದ್ದು ಅವರು ಸಮರ ಕಲೆಗಳ ತಜ್ಞ ಮತ್ತು ಶಿಲ್ಪಿ ಶಿಹಾ ಹುಸ್ಸೇನಿ ಅವರಿಗೆ ಬೆದರಿಕೆ ಒಡ್ಡಿದ ಆರೋಪವನ್ನು ಎದುರಿಸುತ್ತಿದ್ದಾರೆ. 

ಅವರ ಮೇಲೆ ಕ್ರಿಮಿನಲ್ ಬೆದರಿಕೆ ಆರೋಪ ಸೇರಿದಂತೆ ಅನೇಕ ಐಪಿಸಿ ಸೆಕ್ಸನ್‌ನ ಪ್ರಕಾರ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 
 
 ನಟರಾಜನ್ ಮತ್ತು ಅವರ ಸಹಾಯಕರು ಉಗ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜೂನ್ 26 ರಂದು ಅವರಿಗೆ ಬೆದರಿಕೆ ಒಡ್ಡಿದ್ದಾರೆ.  ನಟರಾಜನ್ ಸಹಾಯಕನೊಬ್ಬ ಪಿಸ್ತೂಲ್‌ನ್ನು ತೋರಿಸಿ ಬೆದರಿಕೆ ಒಡ್ಡಿದ್ದಾನೆ ಎಂದು ಹುಸ್ಸೇನಿ ಆರೋಪಿಸಿದ್ದಾರೆ. 
 
 ಒಂದು ಶಿಲ್ಪಕಲಾಕೃತಿ ರಚಿಸಿ ಕೊಡುವಂತೆ ನಟರಾಜನ್  ಹುಸ್ಸೇನಿ ಅವರಲ್ಲಿ ಕೇಳಿದ್ದರು. ಶ್ರೀಲಂಕಾ ಯುದ್ಧದ ತಮಿಳು ಸಂತ್ರಸ್ತರಿಗೆ ತಂಜಾವೂರಿನಲ್ಲಿ ಸ್ಮಾರಕ ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು.  ಕಲಾಕೃತಿಗೆ  98 ಲಕ್ಷ ರೂಪಾಯಿಯನ್ನು ನೀಡಲು ಒಪ್ಪಿಕೊಂಡಿದ್ದ ನಟರಾಜನ್  ಕೇವಲ  25 ಲಕ್ಷ ರೂಪಾಯಿಗಳನ್ನು ಮಾತ್ರ  ಪಾವತಿ ಮಾಡಿದ್ದರು ಎಂದು  ಹುಸ್ಸೇನಿ ಹೇಳುತ್ತಾರೆ. 
 
ಈ ಕಾರಣಕ್ಕೆ ನಟರಾಜನ್ ಹುಸ್ಸೇನಿ ಅವರಿಗೆ ಬೆದರಿಕೆ ಒಡ್ಡುತ್ತಿದ್ದರು ಎಂದು ತಿಳಿದು ಬಂದಿದೆ. 
 
ನೀಡಲಾಗಿರುವ ದೂರನ್ನು ಆಧರಿಸಿ ನಟರಾಜನ್ ಮೇಲೆ ಸಮನ್ಸ್ ಜಾರಿಯಾಗಿದ್ದು ಅವರನ್ನು ಬಂಧಿಸಲಾಗಿದೆ. 

ವೆಬ್ದುನಿಯಾವನ್ನು ಓದಿ