ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ?

ಗುರುವಾರ, 26 ಮಾರ್ಚ್ 2015 (17:33 IST)
ಬುಧವಾರ ತಮಿಳುನಾಡು ಸರಕಾರ ಬಜೆಟ್‌ನ್ನು ಮಂಡಿಸಿತು. ಬಜೆಟ್‌ನುದ್ದಕ್ಕೂ ತಮ್ಮ ಪಕ್ಷದ ( ಎಐಡಿಎಂಕೆ) ನಾಯಕಿ ಜಯಲಲಿತಾ ಅವರನ್ನು ಪದೇ ಪದೇ  ಉಲ್ಲೇಖಿಸಿದ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ಮತ್ತೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಾರೆ ಎಂಬುದು ಖಚಿತ ಎಂದು ಪ್ರತಿಜ್ಞೆ ಮಾಡಿದರು. 

ಎರಡುವರೆ ಗಂಟೆಗಳ ತಮ್ಮ ಬಜೆಟ್ ಪ್ರಸ್ತುತಿಯನ್ನು ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಜಯಲಲಿತಾರನ್ನು ಬಹುವಾಗಿ ನೆನಪಿಸಿಕೊಂಡ ಸೆಲ್ವ್ಂ,  ಕ್ರಾತಿಕಾರಿ ನಾಯಕಿ ಅಮ್ಮ ತೋರಿದ ಹಾದಿಯಲ್ಲಿ ನಾವು ಸಾಗಬೇಕಿದೆ. ಈ ಆಗಸ್ಟ್ ಹೌಸ್‌ನಲ್ಲಿ ಮತ್ತೆ   ನಮ್ಮ ಪ್ರೀತಿಯ ಮುಖ್ಯಮಂತ್ರಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅವರು  ಹೆಚ್ಚಿನ ಶಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ  ನಮ್ಮನ್ನು ಮುನ್ನಡೆಸುವುದನ್ನು ನೋಡುವ ದಿನಗಳು ಹೆಚ್ಚು ದೂರವಿಲ್ಲ ಎಂದರು. 
 
ತಮ್ಮ ಬಜೆಟ್ ಪ್ರಸ್ತುತಿ ವೇಳೆ ಸೆಲ್ವ್ಂ ಕನಿಷ್ಠ 150 ಬಾರಿ 'ಅಮ್ಮ' ನನ್ನು ಹೊಗಳಿದರು. 
 
ಬಜೆಟ್ ಕುರಿತಾದ ಪ್ರತಿಯೊಂದು ಅಂಶ ಮತ್ತು ಇದರ ಹಿಂದಿರುವ ಪ್ರೇರಣಾ ಶಕ್ತಿ ಅಮ್ಮ. ಅವರು ನೀಡಿರುವ ಮಾರ್ಗದರ್ಶನದ ಮೇರೆಗೆ ಬಜೆಟ್‌ನ್ನು ರಚಿಸಲಾಗಿದೆ. ಅವರು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಸಂಪೂರ್ಣ ಜೀವನವನ್ನು ಜನರ ಒಳಿತಿಗಾಗಿಯೇ ತ್ಯಾಗ ಮಾಡಿದರು ಎಂಬುದರ ಮೂಲಕ ಸೆಲ್ವ್ಂ ಜಯಲಲಿತಾರವರನ್ನು ಮನಸಾರೆ ಕೊಂಡಾಡಿದರು. 

ವೆಬ್ದುನಿಯಾವನ್ನು ಓದಿ