ಬಾಕಿ ಕಾವೇರಿ ನೀರು ಪೂರೈಕೆಗಾಗಿ ಕರ್ನಾಟಕದ ವಿರುದ್ಧ ಜಯಾ ಮತ್ತೆ ತಗಾದೆ: ಪ್ರಧಾನಿಗೆ ಪತ್ರ

ಶನಿವಾರ, 5 ಸೆಪ್ಟಂಬರ್ 2015 (12:19 IST)
ಕರ್ನಾಟಕದಲ್ಲಿ ನೀರಿಲ್ಲದೆ ಬರಗಾಲ ಎದುರಾಗಿರುವ ಈ ಸನ್ನಿವೇಶದಲ್ಲಿ ತಮಿಳುನಾಡು ಮುಖ್ಯಮಂತ್ರಿ ಕಾವೇರಿ ನದಿ ನೀರಿಗಾಗಿ ಮತ್ತೆ ತಗಾದೆ ತೆಗೆದಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 
 
ಪ್ರಧಾನಿಗೆ ಪತ್ರ ಬರೆದಿರುವ ಜಯಲಲಿತಾ, ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕಾವೇರಿ ನ್ಯಾಯ ಮಂಡಳಿಯು ವರ್ಷಕ್ಕೆ 94 ಟಿಎಂಸಿ ನೀರನ್ನು ಬಿಡುಗಡೆಗೊಳಿಸಬೇಕೆಂದು ಆದೇಶಿಸಿತ್ತು. ಆದರೆ ತೀರ್ಪಿನ ಪ್ರಕಾರ ಕರ್ನಾಟಕವು ಈ ಬಾರಿ ಕೇವಲ 66.443 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಇನ್ನೂ 27.57 ಟಿಎಂಸಿ ನೀರು ಬಿಡುಗಡೆಗೊಳಿಸಬೇಕಿರುವುದು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ಆದೇಶ ಹೊರಡಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.  
 
ಇನ್ನು ಜಯಲಲಿತಾ ಅವರು ಈ ಹಿಂದೆಯೂ ಕೂಡ ಕಾವೇರಿ ನೀರಿಗೆ ಸಂಬಂಧಿಸಿದಂತೆ ಇಂತಹದೇ ತಗಾದೆಯನ್ನು ಹಲವು ಬಾರಿ ತೆಗೆದಿದ್ದರು. 

ವೆಬ್ದುನಿಯಾವನ್ನು ಓದಿ