ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಜಯಂತಿ ನಟರಾಜನ್

ಶುಕ್ರವಾರ, 30 ಜನವರಿ 2015 (11:25 IST)
ಕಾಂಗ್ರೆಸ್‌ಗೆ  ಕೇಂದ್ರದ ಮಾಜಿ ಸಚಿವೆ ಜಯಂತಿ ನಟರಾಜನ್  ಗುಡ್‌ಬೈ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಗೆ ಉದ್ದನೆಯ ಪತ್ರವನ್ನು ಅವರು ಬರೆದಿದ್ದು, ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ರಾಹುಲ್ ಗಾಂಧಿ ಕಾರ್ಯಾಲಯದಿಂದ ತಮಗೆ ದೂರವಾಣಿ ಕರೆಗಳು ಬರುತ್ತಿದ್ದು, ಕಂಪನಿಯ ಏಜಂಟರಂತೆ ವರ್ತಿಸುತ್ತಿದ್ದರು.

ಆದರೆ ತಾವು ಅವುಗಳಿಗೆ ಅನುಮತಿ ನೀಡಿರಲಿಲ್ಲ ಎಂದು ಜಯಂತಿ ನಟರಾಜನ್ ಹೇಳಿದ್ದಾರೆ. ಜಯಂತಿ ನಟರಾಜನ್ ಇಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.ಪ್ರಮುಖ ಯೋಜನೆಗಳಿಗೆ ಅನುಮತಿ ನೀಡಲು ನಿರಾಕರಿಸುವ ಮೂಲಕ ಅಭಿವೃದ್ಧಿಗೆ ತಡೆವೊಡ್ಡಿದ್ದಾರೆಂದು ನಟರಾಜನ್ ಮತ್ತಿತರ ಕ್ಯಾಬಿನೆಟ್ ಸಹೋದ್ಯೋಗಿಗಳ ವಿರುದ್ಧ ದೂರಲಾಗಿತ್ತು.

ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದಾಗ ಚುನಾವಣೆಗೆ ಮುಂಚಿತವಾಗಿಯೇ ರಾಜೀನಾಮೆ ಸಲ್ಲಿಸಿದ್ದರು. ಮಧ್ಯಾಹ್ನ 12.30ಕ್ಕೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಚಿವಾಲಯದ ನಿರ್ಧಾರಗಳಲ್ಲಿ ರಾಹುಲ್ ಗಾಂಧಿ ಹಸ್ತಕ್ಷೇಪ ಮಾಡಿದ್ದಕ್ಕೆ ತಾವು ಸಾಕ್ಷ್ಯ ನೀಡುವುದಾಗಿ ತಿಳಿಸಿದರು. ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡುವಂತೆ ಕಾಂಗ್ರೆಸ್ ತಮಗೆ ಒತ್ತಾಯಿಸಿತು ಎಂದು ಸೋನಿಯಾಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ ವೈಯಕ್ತಿಕವಾಗಿ ಯಾವುದೇ ವಿಷಯ ಕೆದಕಲು ಅವರು ನಿರಾಕರಿಸಿದರೂ ಕೂಡ ಅವರಿಗೆ ಒತ್ತಾಯಿಸಲಾಯಿತು. ಮೋದಿ ತಮ್ಮ ಆಗಿನ ಗೃಹಸಚಿವ ಅಮಿತ್ ಶಾ ಮೂಲಕ ಯುವ ಮಹಿಳಾ ವಾಸ್ತುವಿನ್ಯಾಸಕಿ ಮೇಲೆ ಅಕ್ರಮವಾಗಿ ಬೇಹುಗಾರಿಕೆ ನಡೆಸುವಂತೆ ಆದೇಶ ನೀಡಿದ್ದರೆಂದು ಕಾಂಗ್ರೆಸ್ ಆರೋಪಿಸಿತ್ತು.

ವೆಬ್ದುನಿಯಾವನ್ನು ಓದಿ