ಐಸಿಯುನಲ್ಲಿರುವ ಜೆಡಿಯು ಕೋಮಾದಿಂದ ಹೊರಬರದು: ಗಿರಿರಾಜ್ ಸಿಂಗ್
ಸೋಮವಾರ, 19 ಮೇ 2014 (12:23 IST)
ಬಿಹಾರದ ಆಡಳಿತ ಪಕ್ಷ ಜೆಡಿಯು ಬಗ್ಗೆ ಮತ್ತೆ ಟೀಕೆಗಿಳಿದಿರುವ ಬಿಜೆಪಿಯ ವಿವಾದಾತ್ಮಕ ನಾಯಕ ಗಿರಿರಾಜ್ ಸಿಂಗ್ ಜೆಡಿಯು ತೀವೃ ನಿಗಾ ಘಟಕದಲ್ಲಿದ್ದು, ಕೋಮಾದಿಂದ ಹೊರ ಬರದ ಸ್ಥಿತಿಯಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.
ಸುದ್ದಿವಾಹಿನಿಯ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ಜೆಡಿಯು ಈಗ ಐಸಿಯು ನಲ್ಲಿದೆ. ಆ ಪಕ್ಷ ಕೋಮಾದಿಂದ ಹೊರ ಬರುವುದಿಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಪಟ್ಟವನ್ನು ತ್ಯಜಿಸಿದ್ದು, ರಾಜ್ಯದಲ್ಲಿ ಕಂಡು ಬರುತ್ತಿರುವ ನಿರಂತರ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ.
ಬಿಜೆಪಿ ಜತೆ ಮೈತ್ರಿ ಹೊಂದಿದ್ದ ಜೆಡಿಯು, ಕಳೆದ ವರ್ಷ ಕೇಸರಿ ಪಕ್ಷದಿಂದ ದೂರವಾಗಿತ್ತು. 2009ರಲ್ಲಿ 20 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಜೆಡಿಯು, ಈ ಬಾರಿ ಕೇವಲ 2 ಸ್ಥಾನಗಳನ್ನು ಗಳಿಸಿ ಮುಖಭಂಗವನ್ನು ಅನುಭವಿಸಿದೆ.