ಜೆಡಿಯು, ಕಾಂಗ್ರೆಸ್ ಮತ್ತು ಆರ್‌ಜೆಡಿ ಸೇರಿ ಬಿಜೆಪಿಯನ್ನು ಸೋಲಿಸಲಿವೆ: ನಿತೀಶ್

ಬುಧವಾರ, 30 ಜುಲೈ 2014 (15:22 IST)
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿ ಇಟ್ಟುಕೊಂಡಿರುವ ತಮ್ಮ ಪಕ್ಷ 10 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಜತೆ ಸೇರಿ  ಕಣಕ್ಕಿಳಿಯಲಿದೆ ಎಂದು ಜೆಡಿಯು ವರಿಷ್ಠ ಮತ್ತು  ಬಿಹಾರ್ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. 

10 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ  ಜತೆ ಸೇರಿ ಕಣಕ್ಕಿಳಿಯಲು "ಜೆಡಿ (ಯು)  ರಾಜ್ಯ ಕಾರ್ಯನಿರ್ವಾಹಕ ಘಟಕ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ. 
 
ಆಗಸ್ಟ್‌ನಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಗೆ ಮಣ್ಣು ಮುಕ್ಕಿಸುವ ಉದ್ದೇಶದೊಂದಿಗೆ ನಾವೆಲ್ಲರೂ ಒಗ್ಗಟ್ಟಾಗುವ ಕುರಿತು  ಕಾಂಗ್ರೆಸ್ ಮತ್ತು ಆರ್‌ಜೆಡಿ ಜತೆ ಪಕ್ಷದ ರಾಜ್ಯ ಅಧ್ಯಕ್ಷ ಬಸಿಸ್ತಾ ನಾರಾಯಣ್ ಸಿಂಗ್  ಮಾತುಕತೆ ನಡೆಸಿದ್ದಾರೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
 
ಈ ಕುರಿತು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಜತೆ ನಾನಿನ್ನೂ ಮಾತನಾಡಬೇಕಿದೆ ಎಂದು ನಿತೀಶ್ ತಿಳಿಸಿದ್ದಾರೆ. 
 
ಈ ಕುರಿತು ಪಕ್ಷದ ಪತ್ರಕರ್ತರೊಂದಿಗೆ ಮಾತನಾಡಿರುವ ಪಕ್ಷದ ರಾಜ್ಯಾಧ್ಯಕ್ಷ ಬಸಿಸ್ತಾ ನಾರಾಯಣ್ ಸಿಂಗ್ ಕಾಂಗ್ರೆಸ್ ಮತ್ತು ಆರ್‌ಜೆಡಿ ಜತೆ ಸೇರಿ ಚುನಾವಣೆಗಿಳಿಯುವ ತನ್ನ ಪಕ್ಷದ ನಿರ್ಧಾರವನ್ನು ಖಚಿತಪಡಿಸಿದ್ದಾರೆ. 
 
ಆದರೆ 3 ಪಕ್ಷದೊಳಗೆ ಇನ್ನೂ ಸೀಟು ಹಂಚಿಕೆಯ ಮಾತು ನಡೆದಿಲ್ಲ ಇಂದು ರಾತ್ರಿ ದೆಹಲಿಗೆ ಹೋಗುತ್ತಿರುವ ನಾನು ಈ ಕುರಿತು ಮಿತ್ರಪಕ್ಷಗಳ ನಾಯಕರ ಜತೆ ಮಾತುಕತೆ ನಡೆಸಲಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ