ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ: ಮೋದಿ ವಿರುದ್ಧ ಜೆಡಿಯು ವಾಗ್ದಾಳಿ

ಶನಿವಾರ, 1 ಆಗಸ್ಟ್ 2015 (14:56 IST)
ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಘೋಷಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ, ಇದೀಗ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸುತ್ತಿದೆ ಎಂದು ಜೆಡಿಯು ವಾಗ್ದಾಳಿ ನಡೆಸಿದೆ. 
 
ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಬಿಹಾರ್ ರಾಜ್ಯ ಅಭಿವೃದ್ಧಿ ಹೊಂದಲು ವಿಶೇಷ ಸ್ಥಾನಮಾನ ನೀಡುವಂತೆ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಲಾಗಿತ್ತು. ಕೇವಲ ಪ್ಯಾಕೇಜ್ ನೀಡುವುದರಿಂದ ರಾಜ್ಯ ಅಭಿವೃದ್ಧಿಯಾಗುವುದಿಲ್ಲ ಎಂದು ಜೆಡಿಯು ನಾಯಕ ಕೆ.ಸಿ ತ್ಯಾಗಿ ಹೇಳಿದ್ದಾರೆ.
 
ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ನೀತಿಗಳಿಲ್ಲ ಎಂದು ಕೇಂದ್ರ ಸರಕಾರ ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ತಿರಸ್ಕರಿಸಿದೆ.  
 
ಸರಕಾರಿ ಮೂಲಗಳ ಪ್ರಕಾರ, 14ನೇ ಹಣಕಾಸು ಆಯೋಗ ವಿಶೇಷ ಮತ್ತು ಸಾಮಾನ್ಯ ರಾಜ್ಯಗಳು ಎನ್ನುವ ಬಗ್ಗೆ ವರ್ಗಿಕರಿಸಿಲ್ಲವಾದ್ದರಿಂದ ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಮೋದಿ ಸರಕಾರ ಬಿಹಾರ್ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿದೆ.   

ವೆಬ್ದುನಿಯಾವನ್ನು ಓದಿ