ಪಕೋಡಾ, ತರಕಾರಿ ಖರೀದಿಸಬೇಕಾದ್ರೆ ಪ್ಯಾನ್ ಕಾರ್ಡ್ ಕಡ್ಡಾಯ

ಶುಕ್ರವಾರ, 1 ಏಪ್ರಿಲ್ 2016 (19:15 IST)
ವಿಶ್ವದ ವಜ್ರಗಳ ತವರೂರು ಎಂದು ಕರೆಸಿಕೊಳ್ಳುವ ನಗರದಲ್ಲಿ ಚಿನ್ನಾಭರಣಗಳ ವಹಿವಾಟುದಾರರು ಪಕೋಡಾ ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಆರಂಭಿಸಿದ್ದು, 10 ರೂಪಾಯಿಗಳಿಗಿಂತ ಹೆಚ್ಚಿನದನ್ನು ಖರೀದಿಸಬೇಕಾದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿದ್ದಾರೆ.
 
ಇದು ಏಪ್ರಿಲ್ ಫೂಲ್ ಜೋಕ್ ಅಲ್ಲ. ಸತ್ಯ, ನಂಬಿದ್ರೆ ನಂಬಿ ಬಿಟ್ರೆ ಬಿಡಿ ನಿಮ್ಮಿಷ್ಟ. ಒಂದು ವೇಳೆ, ನೀವು ಹಾಸ್ಯಾಸ್ಪದ ಎಂದು ಭಾವಿಸಿದಲ್ಲಿ.ಅದೇ ಹಾಸ್ಯಾಸ್ಪದವನ್ನು ಕೇಂದ್ರ ಸರಕಾರಕ್ಕೆ ತೋರಿಸಲು ವರ್ತಕರು ಮಾಡಿರುವ ವಿನೂತನ ಪ್ರತಿಭಟನೆ. 
 
ಕೇಂದ್ರ ಸಚಿವ ಅರುಣ್ ಜೇಟ್ಲಿ, ಚಿನ್ನಾಭರಣಗಳಿಗೆ ಸಂಬಂಧಿಸಿದ ವಹಿವಾಟು 2 ಲಕ್ಷ ರೂಪಾಯಿಗಳಿಗೆ ಮೀರಿದ್ದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿರುವುದು ಕೂಡಾ ಅಷ್ಟೆ ಹಾಸ್ಯಾಸ್ಪದ ಎನ್ನುವುದು ಚಿನ್ನಾಭರಣ ವಹಿವಾಟುದಾರರ ಅಭಿಪ್ರಾಯವಾಗಿದೆ.
 
ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇರಿದ ಶೇ.1 ರಷ್ಟು ಅಬಕಾರಿ ತೆರಿಗೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಿರುವ ಚಿನ್ನಾಭರಣಗಳ ವರ್ತಕರು, ಅಬಕಾರಿ- ಟೀ ಕೂಡಾ ಮಾರಾಟ ಮಾಡಿ ಕೇಂದ್ರ ಸರಕಾರವನ್ನು ಗೇಲಿ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ