ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಅಹ್ಮದಾಬಾದ್‌ನಲ್ಲಿ ಭವ್ಯ ಸ್ವಾಗತ

ಬುಧವಾರ, 17 ಸೆಪ್ಟಂಬರ್ 2014 (16:01 IST)
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು ಮಧ್ಯಾಹ್ನ ಗುಜರಾತ್‌ನ ಅಹ್ಮದಾಬಾದ್‌ಗೆ ಬಂದಿಳಿದಾಗ ವಿಮಾನನಿಲ್ದಾಣದಲ್ಲಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಗುಜರಾತಿನ ಮುಖ್ಯಮಂತ್ರಿ ಆನಂದಿ ಬೆನ್ ಅವರನ್ನು ಸ್ವಾಗತಿಸಿದರು. ಚೀನಾ ಅಧ್ಯಕ್ಷರು ಸುಮಾರು 50 ಉದ್ಯಮಿಗಳ ಜೊತೆ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿದ್ದಾರೆ. ಸಾಬರಮತಿ ಆಶ್ರಮದಲ್ಲಿ ಜಿನ್ ಪಿಂಗ್ ಅವರಿಗೆ ಔತಣಕೂಟ ಏರ್ಪಡಿಸಲಾಗಿದ್ದು, ಮೋದಿ ಕೂಡ ಔತಣಕೂಟದಲ್ಲಿ ಜೊತೆಯಾಗಲಿದ್ದಾರೆ. 
ಸಾಂಪ್ರದಾಯಿಕ ಸ್ವಾಗತದ ಬಳಿಕ ಪ್ರಧಾನಿ ಮೋದಿ ಪುಷ್ಪಗುಚ್ಛಗಳೊಂದಿಗೆ ಖಾಸಗಿ ಹೊಟೆಲೊಂದರಲ್ಲಿ ದಂಪತಿಯನ್ನು ಸ್ವಾಗತಿಸಿದರು.

ಸಾಬರಮತಿಯ ನದಿಯ ದಂಡೆಯಲ್ಲಿ ಸ್ವಿಸ್ ಐಷಾರಾಮಿ ಟೆಂಟ್‌ನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಅವರು ಚಂದ್ರನಬೆಳಕಿನ ಭೋಜನಕೂಟದಲ್ಲಿ ಇಂದು ಪಾಲ್ಗೊಳ್ಳಲಿದ್ದಾರೆ. ಕ್ಸಿ ಅವರಿಗೆ ಗುಜರಾತಿನ 150 ತಿನಿಸುಗಳನ್ನು ಬಡಿಸಲಾಗುವುದು ಮತ್ತು ನದಿದಂಡೆಯ ವಿಹಾರದಲ್ಲಿ ಕ್ಸಿ ಅವರು ಮೋದಿಯನ್ನು ಜೊತೆಗೂಡಲಿದ್ದಾರೆ.

 ಉಭಯ ಮುಖಂಡರು ಮೂಲಸೌಲಭ್ಯ, ರೈಲ್ವೆ ಮತ್ತು ಅಹ್ಮದಾಬಾದ್ ಮತ್ತು ಚೀನಾದ ಗಾಂಗ್‌ಡಾಂಗ್ ಪ್ರಾಂತ್ಯದ ನಡುವೆ ಸಿಸ್ಟರ್ ಸಿಟಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಸಂಬಂಧ ಸರಳ ಗಣಿತವನ್ನು ಮೀರಿದ್ದು ಇಂಚ್(ಭಾರತ ಮತ್ತು ಚೀನಾ) ಮೈಲ್ಸ್‌ಗಳತ್ತ ಎಂಬ ಹೊಸ ಮಂತ್ರದೊಂದಿಗೆ ಬಾಂಧವ್ಯ ಬೆಸೆಯಲಾಗುತ್ತದೆ ಎಂದು ಮೋದಿ ಹೇಳಿದ್ದರು. 

ವೆಬ್ದುನಿಯಾವನ್ನು ಓದಿ