ಯುವಕನ ಬಾಯಿಯಿಂದ 232 ಹಲ್ಲುಗಳನ್ನು ಹೊರತೆಗೆದ ವೈದ್ಯರು

ಗುರುವಾರ, 24 ಜುಲೈ 2014 (15:52 IST)
ಮನುಷ್ಯರಿಗೆ 32 ಹಲ್ಲುಗಳಿರುತ್ತವೆ ಎನ್ನುವುದು ಎಲ್ಲರಿಗೆ ಗೊತ್ತಿರುವ ಸಂಗತಿ. ಆದರೆ,ಇಲ್ಲೊಬ್ಬ ಯುವಕನ ಬಾಯಿಯಿಂದ ವೈದ್ಯರು 232 ಹಲ್ಲುಗಳನ್ನು ಹೊರತೆಗೆದು ದಾಖಲೆ ನಿರ್ಮಿಸಿದ್ದಾರೆ. 
 
ಬಾಯಿಯಲ್ಲ ನೋವಿದೆ ಎಂದು ಆಸ್ಪತ್ರೆಗೆ ದಾಖಲಾದ ಯುವಕನ ಪ್ರಕರಣ ಅಪರೂಪಗಳಲ್ಲಿ ಅಪರೂಪವಾಗಿದ್ದು, ಟೂಥ್ ಡೆವಲೆಪ್‌ಮೆಂಟಲ್ ಅನೋಮಾಲಿ ಎನ್ನುವ ರೋಗದಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
 
ಬಲ್ದಾನಾ ಪಟ್ಟಣ ಮೂಲದ ಆಶಿಕ್ ಗವೈ ಎನ್ನುವ ಹತ್ತನೇ ಕ್ಲಾಸ್‌ನ ವಿದ್ಯಾರ್ಥಿಯ ಬಾಯಿಯ ಬಲಭಾಗದಲ್ಲಿ ಕಂಡು ಬಂದ ನೋವಿನಿಂದಾಗಿ ಜೆ.ಜೆ.ಆಸ್ಪತ್ರೆಗೆ ಕಳೆದ ಜೂನ್ ತಿಂಗಳಲ್ಲಿ ದಾಖಲಾಗಿದ್ದ. ಅನೇಕ ವೈದ್ಯರು ಯುವಕನ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಲೆ ನೀಡುವಲ್ಲಿ ವಿಫಲವಾದರು. ನಂತರ ಖ್ಯಾತ ತಜ್ಞ ವೈದ್ಯರ ತಂಡವೊಂದು ಹಲವು ಪರೀಕ್ಷೆಗಳು ನಡೆಸಿದ ನಂತರ ರೋಗವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. 
 
ಬೆಳಿಗ್ಗೆ ಯುವಕನ ಶಸ್ತ್ರಚಿಕಿತ್ಸೆ ಆರಂಭಿಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಚಿಕ್ಕ ಚಿಕ್ಕ ಹಲ್ಲುಗಳಿಂದ ಆಟದ ಸಣ್ಣ ಗೋಲಿಯ ಗಾತ್ರದವರೆಗೆ ಒಟ್ಟು 232 ಹಲ್ಲುಗಳನ್ನು ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಮಾಡದಿದ್ದಲ್ಲಿ ಹಲ್ಲುಗಳು ನಿರಂತರವಾಗಿ ನೋವು ಉಂಟು ಮಾಡುತ್ತಿದ್ದವು ಎಂದು ಜೆಜೆ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಸುನಂದಾ ಧಿವಾರೆ ಪಲ್ವಾನ್‌ಕರ್ ಹೇಳಿದ್ದಾರೆ.
 
 

ವೆಬ್ದುನಿಯಾವನ್ನು ಓದಿ