ತವರಿನತ್ತ ಕಲಾಂ ಪಾರ್ಥಿವ ಶರೀರ

ಬುಧವಾರ, 29 ಜುಲೈ 2015 (10:20 IST)
ಮಾಜಿ ರಾಷ್ಟ್ರಪತಿ, ಮಹಾನ್ ವಿಜ್ಞಾನಿ, ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ 8.15ಕ್ಕೆ  ನದೆಹಲಿಯ ನಿವಾಸದಿಂದ ಅವರ ಜನ್ಮಸ್ಥಳವಾದ ರಾಮೇಶ್ವರಂದತ್ತ ರವಾನಿಸಲಾಯಿತು.
ಕಲಾಂ ಅವರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ವಿಮಾನ ಮಧುರೈಗೆ ಹೊರಟಿದೆ. ಮಧುರೈನಿಂದ ಕಲಾಂ ಅವರ ಪಾರ್ಥಿವ ಶರೀರವನ್ನು ಐಎಎಫ್‌ನ ಹೆಲಿಕಾಪ್ಟರ್ ಮೂಲಕ ರಾಮೇಶ್ವರಂಗೆ ರವಾನಿಸಲಾಗುತ್ತದೆ. ಇಂದು ಮಧ್ಯಾಹ್ನದ ವೇಳೆಗೆ ಪಾರ್ಥಿವ ಶರೀರ ರಾಮೇಶ್ವರಂಗೆ ತಲುಪಲಿದ್ದು ರಾತ್ರಿ 7 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. 
 
ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಬಿಜೆಪಿ ನಾಯಕ ಶಹನ್ವಾಜ್ ಹುಸೇನ್ ಈ ವಿಮಾನದಲ್ಲಿ ಪ್ರಯಾಣ ಬೆಳಸಿದ್ದಾರೆ. 
 
ನಾಳೆ ಕುಟುಂಬ ವರ್ಗದವರ ಸಂಪ್ರದಾಯಿಕ ಆಚರಣೆಗಳು ನಡೆದ ನಂತರ ಮಧ್ಯಾಹ್ನ 12.30 ರ ಸುಮಾರಿಗೆ ಕಲಾಂ ಶರೀರದ ಅಂತ್ಯ ಸಂಸ್ಕಾರವನ್ನು ನಡೆಸಲಾಗುವುದು.
 
ಕಲಾಂ ಅಂತ್ಯ ಸಂಸ್ಕಾರಕ್ಕೆ ತಂಗಚಿಮದಮ್ ಪಂಚಾಯತ್ ವ್ಯಾಪ್ತಿಯ ಪೆಯಿಕರಂಬು ಗ್ರಾಮದಲ್ಲಿ ಭೂಮಿಯನ್ನು ತಮಿಳುನಾಡು ಸರ್ಕಾರ ಮಂಜೂರು ಮಾಡಿದೆ. ಆ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಕಲಾಂ ಕುಟುಂಬ ಒಪ್ಪಿದ್ದು, ಆ ಜಾಗವನ್ನು ಮಟ್ಟ ಮಾಡುವ ಕಾರ್ಯ ಭರದಿಂದ ಸಾಗಿದೆ. 

ವೆಬ್ದುನಿಯಾವನ್ನು ಓದಿ