ಅಮೆರಿಕದ ಹಣಕಾಸು ಸಚಿವಾಲಯ ಜಾಗತಿಕ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ನೇಮಿಸುವ ಕೆಲಸ ಮಾಡುತ್ತಿದ್ದ ಮಹಮ್ಮದ್ ಶಫಿ ಆರ್ಮರ್'ನನ್ನು ಸೇರ್ಪಡೆಗೊಳಿಸಿದೆ.
ಛೋಟೇ ಮುಲ್ಲಾ, ಅಂಜಾನ್ ಭಾಯ್ ಮತ್ತು ಯೂಸಫ್ ಅಲ್ ಹಿಂದಿ ಮತ್ತಿತರ ಹೆಸರುಗಳನ್ನು ಹೊಂದಿದ್ದ ಆರ್ಮರ್ ವಿರುದ್ಧ ಈ ಹಿಂದೆಯೇ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಐಎಂ ಸಂಸ್ಥಾಪಕ ರಿಯಾಜ್ ಸೇರಿದಂತೆ ಭಟ್ಕಳ ಸಹೋದರರೊಂದಿಗೆ ಭಿನ್ನಮತದ ಬಳಿಕ, ಆರ್ಮರ್ ಅನ್ಸಾರ್ ಉಲ್ ತೌಹೀದ್ ಸಂಘಟನೆ ಹುಟ್ಟುಹಾಕಿದ್ದ. ಬಳಿಕ ಅದು ಇಸಿಸ್ ಉಗ್ರರಿಗೆ ನಿಷ್ಠೆ ತೋರಿತ್ತು. ತಂತ್ರಜ್ಞಾನದ ಜ್ಞಾನವಿರುವ ಆರ್ಮರ್ ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಭಾರತ, ಬಾಂಗ್ಲಾದೇಶ, ಶ್ರೀಲಂಕಾದ ಯುವಕರನ್ನು ಆಕರ್ಷಿಸಿ ಇಸಿಸ್'ಗೆ ಸೇರ್ಪಡೆಗೊಳಿಸುತ್ತಿದ್ದ.