ದೇಶದ ಅಭಿವೃದ್ಧಿ ದರವನ್ನು ಹಿಂದಿಕ್ಕುವ ಸಾಮರ್ಥ್ಯ ಕರ್ನಾಟಕ ರಾಜ್ಯಕ್ಕಿದೆ: ಅರುಣ್ ಜೇಟ್ಲಿ

ಬುಧವಾರ, 3 ಫೆಬ್ರವರಿ 2016 (19:22 IST)
ರಾಷ್ಟ್ರದ ಅಭಿವೃದ್ಧಿಯಲ್ಲಿ ಕರ್ನಾಟಕ ಮಹತ್ವದ ಪಾತ್ರವಹಿಸುವಂತಹ ಸಾಮರ್ಥ್ಯವಿದೆ ಎಂದು ಕೇಂದ್ರ ಹಣಕಾಸು ಕಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
 
ದೇಶದ ಜಿಡಿಪಿಗಿಂತ ಶೇ.2-3 ರಷ್ಟು ಅಭಿವೃದ್ಧಿ ಜಿಡಿಪಿಯನ್ನು ಕರ್ನಾಟಕ ರಾಜ್ಯದಿಂದ ನಿರೀಕ್ಷಿಸಬಹುದಾಗಿದೆ. ರಾಜ್ಯ ದೇಶದಲ್ಲಿಯೇ ಅತ್ಯಂತ ಮುಂದುವರಿದ ರಾಜ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
  
ಇನ್ವೆಸ್ಟ್ ಕರ್ನಾಟಕ-2016 ಗ್ಲೋಬಲ್ ಇನ್‌ವೆಸ್ಟರ್ ಮೀಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೇಟ್ಲಿ, ವಿದ್ಯಾವಂತ ಯುವಕರ ಸಮೂಹ ಮತ್ತು ನೈಸರ್ಗಿಕ ತಂತ್ರಜ್ಞಾನಗಳಿಂದಾಗಿ ದೇಶದ ಜಿಡಿಪಿಗಿಂತ ಕರ್ನಾಟಕ ಜಿಡಿಪಿಯಲ್ಲಿ ಹೆಚ್ಚಳ ಕಾಣಬಹುದಾಗಿದೆ ಎಂದರು.
 
ಇನ್‌ವೆಸ್ಟ್ ಕರ್ನಾಟ-2016 ಆಯೋಜಿಸಿರುವುದಕ್ಕೆ ರಾಜ್ಯ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಅವರು, ಕರ್ನಾಟಕ ರಾಜ್ಯಕ್ಕೆ ಸಂಪನ್ಮೂಲದ ಸಾಮರ್ಥ್ಯವಿದೆ. ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡಬೇಕಾಗಿದೆ ಎಂದರು. 
 
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ನಿತೀನ್ ಗಡ್ಕರಿ, ವೆಂಕಯ್ಯನಾಯ್ಡು ಮತ್ತು ಅನಂತ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ದೇಶದಲ್ಲಿಯೇ ನಾಯಕತ್ವ ಸ್ಥಾನಪಡೆದಿದೆ. ಅತ್ಯುತ್ತಮ ವಿದ್ಯಾವಂತ ಯುವಕರ ಕೊಡುಗೆಯನ್ನು ರಾಜ್ಯ ದೇಶಕ್ಕೆ ನೀಡಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಸಂತಸ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ