ಮುಖ್ಯೋಧ್ಯಾಪಕ ಹೇಗೆ 13,600 ಕ್ಕೆ ಕೆಲಸ ಮಾಡುತ್ತಾರೆ?: ಕರ್ನಾಟಕ ಹೈಕೋರ್ಟ್

ಶನಿವಾರ, 28 ಮಾರ್ಚ್ 2015 (18:45 IST)
ಶಾಲಾ ಶುಲ್ಕ ಸ್ಥಿರೀಕರಣ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ಸಂಬಳ ಮತ್ತು ವರಮಾನದ ಹಿಂದಿರುವ ತಾರ್ಕಿಕತೆ ವಿವರಿಸಲು ಸೋಮವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಶಿಕ್ಷಣ ಕಾರ್ಯದರ್ಶಿಯವರಿಗೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. 

ನಿಮ್ಮ ಅಧಿಸೂಚನೆ ಸಂಖ್ಯೆ ಅಕ್ಟೋಬರ್ 2014ರ ಪ್ರಕಾರ, ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಂಗಳಿಗೆ ರೂ 13,600, ಗ್ರೂಪ್ ಡಿ ನೌಕರಿಗೆ ರೂ 6,000 ಸಂಬಳವನ್ನು ಪಾವತಿ ಮಾಡುತ್ತಿದ್ದೀರಾ. ಸ್ನಾತಕೋತ್ತರ ಪದವಿ ಪಡೆದಿರುವ ಮುಖ್ಯೋಪಾಧ್ಯಾಪಕರು ಈ  ಸಂಬಳಕ್ಕೆ ಕೆಲಸ ಮಾಡುತ್ತಾರೆ ಎಂದು ಸರಕಾರ ನಿರೀಕ್ಷಿಸಹುದೇ? ಯಾರಿದನ್ನು ನಿಗದಿ ಮಾಡಿದವರು? ನಿಮ್ಮ ಮುಖ್ಯ ಕಾರ್ಯದರ್ಶಿ ಸಂಬಳವೆಷ್ಟು? ಮುಖ್ಯೋಧ್ಯಾಪಕರ ಸಂಬಳದ 4 ಅಥವಾ 5 ಪಟ್ಟು ಅಧಿಕವಲ್ಲವೇ? ಮುಖ್ಯೋಧ್ಯಾಪಕರಿಗೆ ಕಡಿಮೆ ಕೆಲಸ ನೀಡಲಾಗುತ್ತಿದೆಯೇ? ಬೆಂಗಳೂರು ನಗರದಲ್ಲಿ ಹಾಲು ಒಂದು ಲೀಟರ್ ವೆಚ್ಚ ಎಷ್ಟೆಂಬುದು ಗೊತ್ತಾ? " ಎಂದು ಜಸ್ಟೀಸ್ ಕೆ.ಎಲ್ ಮಂಜುನಾಥ್ ನೇತೃತ್ವದ ವಿಭಾಗೀಯ ಪೀಠ ಕಠಿಣವಾಗಿ ಪ್ರಶ್ನಿಸಿದೆ. 
 
"ಕಲ್ಯಾಣ ರಾಜ್ಯದಲ್ಲಿ ಶಿಕ್ಷಣವನ್ನು ನೀಡುವುದು ಸರಕಾರದ ಕರ್ತವ್ಯವಾದ್ದರಿಂದ ಇಂತಹ ಖಾಸಗಿ ಶಾಲೆಗಳಿಗೆ ಸರಕಾರವೇ ಶಿಕ್ಷಕರನ್ನು ನೇಮಿಸುವುದು ಅಥವಾ ಶಾಲೆಗಳು ಆಡಳಿತವನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಇಲ್ಲವೇ ವೃತ್ತಿಪರ ಶಿಕ್ಷಣವನ್ನು ಪಡೆದುಕೊಳ್ಳುವ ಎಸ್ಸಿ / ಎಸ್ಟಿ ವಿದ್ಯಾರ್ಥಿಗಳ ಶುಲ್ಕವನ್ನು ಭರಿಸಿದಂತೆ, ಶುಲ್ಕ ಮತ್ತು ಶಿಕ್ಷಕರಿಗೆ ನೀಡಬೇಕಾದ ಸಂಬಳವನ್ನು ಸರಕಾರವೇ ನೀಡಬೇಕು ಎಂದು ಕೋರ್ಟ್ ಸಲಹೆ ನೀಡಿದೆ.

ವೆಬ್ದುನಿಯಾವನ್ನು ಓದಿ