ರೋಗ ಗುಣಪಡಿಸುವುದಾಗಿ ನಂಬಿಸಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ತಾಂತ್ರಿಕ

ಸೋಮವಾರ, 30 ಮೇ 2016 (17:48 IST)
ರೋಗವನ್ನು ಗುಣಪಡಿಸುವುದಾಗಿ ನಂಬಿಸಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ತಾಂತ್ರಿಕನೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
 
ಪೊಲೀಸ್ ಮೂಲಗಳ ಪ್ರಕಾರ, ಶೇಖರ್ ನಾಲ್ಕೆ ಎನ್ನುವ ಮಾಂತ್ರಿಕ, ತನ್ನ ಮನೆಯಲ್ಲಿಯೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರವೆಸಗಿದ ನಂತರ ಘಟನೆಯ ಬಗ್ಗೆ ಯಾರಿಗೂ ಬಾಯಿಬಿಡದಂತೆ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ. 
 
ದಿನಗೂಲಿ ಕಾರ್ಮಿಕರಾದ ಪೋಷಕರು, ಮಗಳು ರೋಗದಿಂದ ಬಳಲುತ್ತಿರುವುದರಿಂದ ತಾಂತ್ರಿಕನಿಂದ ಗುಣಪಡಿಸಲು ನಿರ್ಧರಿಸಿದ್ದಾರೆ. ಮಗಳನ್ನು ತಾಂತ್ರಿಕನ ಬಳಿ ಕರೆದುಕೊಂಡು ಹೋಗಿ ರೋಗದ ಬಗ್ಗೆ ವಿಚಾರಿಸಿದ್ದಾರೆ.
 
ಬಾಲಕಿಯ ದೇಹವನ್ನು ಪರಿಶೀಲಿಸಿದಂತೆ ಮಾಡಿದ ತಾಂತ್ರಿಕ ಪೋಷಕರಿಗೆ ಒಂದು ಗಂಟೆ ಕಾಲ ಮನೆಯಿಂದ ಹೊರಗಿರುವಂತೆ ಸಲಹೆ ನೀಡಿದ್ದಾನೆ. ಒಂದು ಗಂಟೆಯ ನಂತರ ಮಗಳು ಹಿಂಬದಿಯ ಬಾಗಿಲಿನಿಂದ ಬರುವುದು ಕಂಡು ಪೋಷಕರು ವಿಚಾರಿಸಿದ್ದಾರೆ. ತಾಂತ್ರಿಕ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಬಾಲಿಕ ತಿಳಿಸಿದ್ದಾಳೆ. 
 
ತಾಂತ್ರಿಕ ತಮ್ಮ ಜಾದುವಿನಿಂದ ಕುಟುಂಬಕ್ಕೆ ನಷ್ಟ ತರಬಹುದು ಎನ್ನುವ ಆತಂಕದಲ್ಲಿದ್ದ ಪೋಷಕರು ಕೊನೆಗೂ ಧೈರ್ಯದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾದ ಕೂಡಲೇ ಪೊಲೀಸರು ಆರೋಪಿ ಶೇಖರ್‌ನನ್ನು ಬಂಧಿಸಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರವಾಗಿರುವುದು ಸಾಬೀತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ