ಸರಕಾರಿ ಜಾಹೀರಾತುಗಳಲ್ಲಿ ರಾಜಕಾರಣಿಗಳ ಭಾವಚಿತ್ರ ನಿಷೇಧ: ಸುಪ್ರೀಂ ವಿರುದ್ಧ ಕರುಣಾ ಕಿಡಿ

ಗುರುವಾರ, 14 ಮೇ 2015 (16:06 IST)
ಸರಕಾರಿ ಜಾಹೀರಾತುಗಳಲ್ಲಿ ರಾಜಕಾರಣಿಗಳ ಭಾವಚಿತ್ರವಿರುವುದಕ್ಕೆ ನಿಷೇಧ ಹೇರಿದ ಸುಪ್ರೀಂಕೋರ್ಟ್ ತೀರ್ಪು ರಾಜ್ಯ ಸರಕಾರಗಳ ಅಧಿಕಾರವನ್ನು ಕಸಿದುಕೊಂಡಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯವರಿಗೆ ಒಂದೇ ತೆರನಾದ ಸ್ಥಾನಮಾನವಿದೆ. ದೇಶದ ಜನತೆ ಪ್ರಧಾನಿಯವರಿಗಿಂತ ಮುಖ್ಯಮಂತ್ರಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ರಾಜ್ಯ ಸರಕಾರದ ಜಾಹೀರಾತುಗಳಲ್ಲಿ ಮುಖ್ಯಮಂತ್ರಿಯ ಭಾವಚಿತ್ರವಿರುವುದು ಅಗತ್ಯವಾಗಿದೆ. ರಾಜ್ಯದಲ್ಲಿ ಕೆಲವರು ಮಾತ್ರ ಶಿಕ್ಷಿತರಾಗಿದ್ದಾರೆ. ಬಹುತೇಕ ಗ್ರಾಮೀಣ ಜನತೆ ಅನಕ್ಷರಸ್ಥರಾಗಿದ್ದರಿಂದ ಭಾವಚಿತ್ರವಿದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ.

ಕಳೆದ ಬುಧವಾರದಂದು ಸರಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಸಚಿವರು ಸೇರಿದಂತೆ ರಾಜಕಾರಣಿಗಳ ಭಾವಚಿತ್ರಗಳಿಗೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಕರುಣಾನಿಧಿ ಹೇಳಿಕೆ ಹೊರಬಿದ್ದಿದೆ.

ರಂಜನ್ ಗೋಗೈ, ಪಿನಾಕಿ, ಚಂದ್ರ ಘೋಸ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಜಾಹೀರಾತುಗಳಲ್ಲಿ ರಾಷ್ಟ್ರಪತಿ, ಪ್ರದಾನಮಂತ್ರಿ, ಮುಖ್ಯನ್ಯಾಯಮೂರ್ತಿ ಅಥವಾ ದಿವಂಗತ ನಾಯಕ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರ ಹಾಕಲು ವಿನಾಯಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ