ಕರುಣಾನಿಧಿ ಆರೋಗ್ಯ ಸ್ಥಿರ

ಶನಿವಾರ, 17 ಡಿಸೆಂಬರ್ 2016 (09:24 IST)
ಅನಾರೋಗ್ಯದಿಂದಾಗಿ ಮತ್ತೆ ಆಸ್ಪತ್ರೆ ಸೇರಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಆರೋಗ್ಯ ಸ್ಥಿರವಾಗಿದೆ ಎಂದು ಅವರು ಕಾವೇರಿ ಆಸ್ಪತ್ರೆ ಮೂಲಗಳು ತಿಳಿಸಿವೆ. 

ಕರುಣಾನಿಧಿ (93) ಅವರ ‘ಉಸಿರಾಟದ ತೊಂದರೆ ಸರಿಪಡಿಸಲು  ಟ್ರ್ಯಾಕಿಯಾಸ್ಟಮಿ ಚಿಕಿತ್ಸೆಗೆ  ಒಳಗಾದರು. ಅವರ ಆರೋಗ್ಯ ಸ್ಥಿರವಾಗಿದ್ದು, ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ, ಎಂದು ನಿರ್ದೇಶಕ ಎಸ್. ಅರವಿಂದನ್ ತಿಳಿಸಿದ್ದಾರೆ. 
 
ಗುರುವಾರ ತಡರಾತ್ರಿ ಉಸಿರಾಟದ ಸಮಸ್ಯೆಗೊಳಗಾದ ಅವರನ್ನು ತಕ್ಷಣ ನಗರದಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 
 
ಗಂಟಲು ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಹೇಳಿದೆ.
 
ನ್ಯೂಟ್ರಿಷನ್ ಮತ್ತು ಹೈಡ್ರೇಷನ್ ಸಪೋರ್ಟ್‌ಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಡಿಎಂಕೆ ಮುಖ್ಯಸ್ಥ ಒಂದು ವಾರದ ಚಿಕಿತ್ಸೆ ಬಳಿಕ ಡಿಸೆಂಬರ್ 7 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಬಳಿಕ ಮನೆಯಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ