ಭಾರತದಿಂದ ಕಾಶ್ಮಿರ ಯಾವತ್ತೂ ಪ್ರತ್ಯೇಕವಾಗುವುದಿಲ್ಲ: ಫಾರೂಕ್ ಅಬ್ದುಲ್ಲಾ

ಮಂಗಳವಾರ, 2 ಫೆಬ್ರವರಿ 2016 (15:41 IST)
ನೆರೆರಾಷ್ಟ್ರದ ಶತಪ್ರಯತ್ನಗಳ ಮಧ್ಯೆಯೂ ಭಾರತದಿಂದ ಕಾಶ್ಮಿರ ಯಾವತ್ತೂ ಪ್ರತ್ಯೇಕವಾಗುವುದಿಲ್ಲ ಎಂದು ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
 
ಸಿರೋಹಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಬ್ದುಲ್ಲಾ, ಉಗ್ರಗಾಮಿ ಸಂಘಟನೆಗಳು ದೇಶದ ಗಡಿಭಾಗಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಯತ್ನಿಸುತ್ತಿವೆ. ಆದರೆ, ವಿಶ್ವದಿಂದಲೇ ಭಯೋತ್ಪಾದನೆ ಅಳಿಸಿಹೋಗುವ ದಿನಗಳು ದೂರವಿಲ್ಲ ಎಂದು ಹೇಳಿದ್ದಾರೆ. 
 
ರಾಜಕಾರಣಿಗಳು ಮಹಿಳೆಯರ ಹಕ್ಕುಗಳು ಮತ್ತು ಉದ್ಯೋಗವಕಾಶ ನೀಡಲು ಗಂಭೀರವಾದ ಪ್ರಯತ್ನ ಮಾಡುವುದು ಅಗತ್ಯವಾಗಿದೆ ಎಂದರು.
 
ಪಾಕಿಸ್ತಾನ, ಕಾಶ್ಮಿರ ಪ್ರದೇಶದಲ್ಲಿ ವಿಚ್ಚಿದ್ರಕಾರಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಹಲವಾರು ಘಟನೆಗಳಿಂದ ಸಾಬೀತಾಗಿದೆ. ಭಾರತ ಸರಕಾರ ನೆರೆಯ ರಾಷ್ಟ್ರದೊಂದಿಗೆ ಮೈತ್ರಿ ಬಯಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿಷಾದ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ