ರಣಬೀರ್‌ನೊಂದಿಗೆ ನಿಶ್ಚಿತಾರ್ಥದ ಬಗ್ಗೆ ಮೌನ ಮುರಿದ ಕತ್ರಿನಾ ಕೈಫ್

ಮಂಗಳವಾರ, 28 ಜುಲೈ 2015 (19:34 IST)
ಬಾಲಿವುಡ್‌ನ ಚಿಕನಿ ಚಮೇಲಿ ಕತ್ರಿನಾ ಕೈಫ್ ಬಾಲಿವುಡ್ ಸೂಪರ್ ಹೀರೋ ರಣಬೀರ್ ಕಪೂರ್ ಜೊತೆ ನಿಶ್ಚಿತಾರ್ಥವಾಗಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ್ದಾರೆ.
 
ಫ್ಯಾಂಟಮ್ ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ಬೆಡಗಿ ಇತ್ತಿಚೆಗೆ ವರದಿಯಾದ ನಿಶ್ಚಿತಾರ್ಥದ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ವರದಿಗಳು ಕಪೋಲ ಕಲ್ಪಿತವಾಗಿವೆ ಎಂದು ಹೇಳಿದ್ದಾರೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಕತ್ರಿನಾ, ಪ್ರಸ್ತುತ ನಾನಿದ್ದ ಪರಿಸ್ಥಿತಿಯಲ್ಲಿ ತುಂಬಾ ಸಂತೋಷವಾಗಿದ್ದೇನೆ. ಶೀಘ್ರದಲ್ಲಿ ಮದುವೆಯಾಗುವ ಸಾಧ್ಯತೆಗಳಿಲ್ಲ. ಕತ್ರಿನಾ ರಣಬೀರ್ ಕಪೂರ್‌ನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವುದು ವಿಶ್ವಕ್ಕೆ ತಿಳಿದಿದ್ದರೂ ಕೂಡಾ ಇಬ್ಬರು ಅಧಿಕೃತವಾಗಿ ಘೋಷಣೆ ಮಾಡದಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.   
 
ಬಾಲಿವುಡ್‌ನಲ್ಲಿ ರಣಬೀರ್ ಮತ್ತು ಕತ್ರಿನಾ ಕೈಫ್‌ಳದ್ದೆ ಹವಾ. ಇಬ್ಬರು ಯಾವಾಗ ವಿವಾಹವಾಗುತ್ತಾರೋ ಎನ್ನುವುದನ್ನು ಬಾಲಿವುಡ್ ಪಂಡಿತರು ತಲೆಕೆಡಿಸಿಕೊಳ್ಳುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ