ಚಿಕಿತ್ಸೆ ಪಡೆದು ಮರಳಿದ ಕೇಜ್ರಿವಾಲ್

ಸೋಮವಾರ, 8 ಫೆಬ್ರವರಿ 2016 (16:30 IST)
ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ದೀರ್ಘಕಾಲದ ಕೆಮ್ಮಿಗಾಗಿ ಚಿಕಿತ್ಸೆ ಪಡೆದುಕೊಂಡು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ನವದೆಹಲಿಗೆ ಮರಳಿದ್ದಾರೆ.

ತವರು ತಲುಪಿದ ಒಂದು ಗಂಟೆಯೊಳಗೆ ತಮ್ಮ ಸರ್ಕಾರದ ಸಚಿವರನ್ನು ಭೇಟಿಯಾದ ಅವರು ಎಮ್‌ಸಿಡಿ ನೈರ್ಮಲ್ಯ ಕಾರ್ಮಿಕರ ಧರಣಿ ಮತ್ತು ರೈಯಾನ್ ಅಂತರಾಷ್ಟ್ರೀಯ ಶಾಲೆಯಲ್ಲಿ 6 ವರ್ಷದ ಬಾಲಕ ಸಾವನ್ನಪ್ಪಿದ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಪಡೆದರು.
 
ಚಳಿಗಾಲವಾದ್ದರಿಂದ ಕೇಜ್ರಿವಾಲ್ ಅವರಿಗೆ  ಕೆಮ್ಮು ವಿಪರೀತವಾಗಿ ಬಾಧಿಸುತ್ತಿತ್ತು ಮತ್ತು ಮಧುಮೇಹವೂ ಹೆಚ್ಚಿತ್ತು. ಹೀಗಾಗಿ ಅವರು ಕಳೆದ ಜನವರಿ 27 ರಂದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. 
 
ಕಳೆದ ಮಾರ್ಚ್ ತಿಂಗಳಲ್ಲಿ ಸಹ ಅವರು ಇದೇ ಆರೋಗ್ಯ ಸಮಸ್ಯೆಗಳಿಗಾಗಿ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ 10 ದಿನಗಳ ಕೋರ್ಸ್‌ಗೆ ಒಳಪಟ್ಟಿದ್ದರು. 
 
ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೆಹಲಿ ಸರ್ಕಾರದ ದೈನಂದಿನ ಆಡಳಿತವನ್ನು ಸಂಭಾಳಿಸಿದ್ದರು.
 
ಕೇಜ್ರಿವಾಲ್ ಅವರು ಬೆಂಗಳೂರಿನಲ್ಲಿದ್ದಾಗ ಬಿಜೆಪಿ ಅಧಿಕಾರದಲ್ಲಿರುವ ಮುನ್ಸಿಪಲ್ ಕಾರ್ಪೋರೇಶನ್ ಅಡಿಯಲ್ಲಿ ಬರುವ ನೈರ್ಮಲ್ಯ ಕಾರ್ಮಿಕರು, ವೈದ್ಯರು, ಶಿಕ್ಷಕರು 
ಸಂಬಳ ಪಾವತಿಸದಿದ್ದ ಕಾರಣಕ್ಕೆ ಧರಣಿ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ