ಎಸಿಬಿ ಮುಖ್ಯಸ್ಥರಿಗೆ ನಿರ್ಭಂಧನೆ ಹೇರಿದ ಕೇಜ್ರಿವಾಲ್ ಸರಕಾರ

ಬುಧವಾರ, 1 ಜುಲೈ 2015 (20:30 IST)
ಲೆಫ್ಟಿನೆಂಟ್ ಗವರ್ನರ್ ಬೆಂಬಲಿತ ಭ್ರಷ್ಟಚಾರ ನಿಗ್ರಹ ದಳದ ಮುಖ್ಯಸ್ಥ ಎಂ.ಕೆ. ಮೀನಾ ಅವರಿಗೆ ಆಮ್ ಆದ್ಮಿ ಸರಕಾರ ಕೆಲ ನಿರ್ಧಿಷ್ಠ ನಿರ್ಭಂಧನೆಗಳನ್ನು ಹೇರಿದೆ.
 
ಭ್ರಷ್ಟಚಾರ ನಿಗ್ರಹ ದಳದ ಮುಖ್ಯಸ್ಥ ಎಂ.ಕೆ. ಮೀನಾ ತರಬೇತಿ ಹಾಗೂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳ ಬಗ್ಗೆ ಮಾತ್ರ ಗಮನಹರಿಸಬೇಕು ಎಂದು ಆಪ್ ಸರಕಾರ ಆದೇಶಿಸಿದೆ.
 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಬಲಿತ ಭ್ರಷ್ಟಾಚಾರ ನಿಗ್ರಹ ದಳದ ಆಯುಕ್ತರಾದ ಎಸ್.ಎಸ್.ಯಾದವ್ ಅವರಿಗೆ ಕಚೇರಿಯ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದೆ. ಇದರಿಂದ ಲೆಫ್ಟಿನೆಂಟ್ ಗವರ್ನರ್‌ಗೆ ಮುಖಭಂಗವಾದಂತಾಗಿದೆ.
 
ಅರವಿಂದ್ ಕೇಜ್ರಿವಾಲ್ ಸರಕಾರದ ಆದೇಶದ ಪ್ರಕಾರ,ಭ್ರಷ್ಟಾಚಾರ ನಿಗ್ರಹ ದಳದ ಆಯುಕ್ತರಾದ ಎಸ್.ಎಸ್.ಯಾದವ್ ಪ್ರಕರಣದ ತನಿಖೆ, ವಿವರಗಳನ್ನು ನೇರವಾಗಿ ಮುಖ್ಯಮಂತ್ರಿಯವರಿಗೆ ನೀಡಬಹುದಾಗಿದೆ.
 
ಭ್ರಷ್ಟಾಚಾರ ನಿಗ್ರಹ ದಳದ ಜಂಟಿ ಆಯುಕ್ತರಾಗಿ ಮೀನಾ ಅವರನ್ನು ನೇಮಕ ಮಾಡಲಾಗಿತ್ತು. ಆದರೆ. ಎಸಿಬಿಯಲ್ಲಿ ಅಂತಹ ಹುದ್ದೆಯಿಲ್ಲವಾದ್ದರಿಂದ ಆಪ್ ಪಕ್ಷ ಕೋರ್ಟ್ ಮೆಟ್ಟಿಲೇರಿದೆ.  
 
ಎಸಿಬಿಯ ಹೆಚ್ಚುವರಿ ಆಯುಕ್ತರಾದ ಎಸ್‌.ಎಸ್.ಯಾದವ್, ಡಿಸಿಪಿ, ಎಸಿಪಿ, ಇನ್ಸೆಪೆಕ್ಟರ್‌ಗಳಉ ಮತ್ತು ಪೊಲೀಸ್ ಠಾಣೆಯ ಅಧಿಕಾರಿಗಳ ಮೇಲ್ವಿಚಾರಣೆ ಮಾಡಲಿದ್ದಾರೆ. ಅಗತ್ಯವಾದಲ್ಲಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವ ವ್ಯಾಪ್ತಿಯನ್ನು ಹೊಂದಿದ್ದಾರೆ.   
 

ವೆಬ್ದುನಿಯಾವನ್ನು ಓದಿ