ಸಾಮಾನ್ಯನಿಗೆ ತೆರಿಗೆ, ಕಾಳಸಂತೆಕೋರರಿಗೆ ಕ್ಷಮಾದಾನ: ಕೇಜ್ರಿವಾಲ್

ಮಂಗಳವಾರ, 1 ಮಾರ್ಚ್ 2016 (17:50 IST)
ಬಜೆಟ್‌ನಲ್ಲಿ ನೌಕರರ ಭವಿಷ್ಯ ನಿಧಿಯ ಮೇಲೆ ಭಾಗಶಃ ತೆರಿಗೆ ಹೇರುವ ಪ್ರಸ್ತಾಪವನ್ನು ಇಟ್ಟಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ. ಇಪಿಎಫ್ ಹೊರ ತೆಗೆದುಕೊಳ್ಳುವಾಗ ಅವರ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ. ಕಪ್ಪು ಹಣ ಹೊಂದಿರುವವರಿಗೆ ಕ್ಷಮಾದಾನವನ್ನು ಮುಕ್ತಿ ನೀಡಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. 
 
ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಮೂಲಕ ಕೇಜ್ರಿವಾಲ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
 
ನಾನು ತುಂಬ ಜನರೊಟ್ಟಿಗೆ ಮಾತನಾಡಿದ್ದೇನೆ. ಎಲ್ಲರಿಗೂ ಈ ಕುರಿತು ಕೋಪವಿದೆ. ಸಾಮಾನ್ಯನ ಇಪಿಎಫ್ ಮರಳಿ ತೆಗೆದುಕೊಳ್ಳುವಾಗ ತೆರಿಗೆ ವಿಧಿಸಲಾಗುತ್ತದೆ, ಆದರೆ ಶ್ರೀಮಂತನ ಸಾಲವನ್ನು ಮನ್ನಾ ಮಾಡಲಾಗುತ್ತದೆ ಮತ್ತು ಕಾಳಸಂತೆಕೋರರು ಕ್ಷಮಾದಾನವನ್ನು ಪಡೆದುಕೊಳ್ಳುತ್ತಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 
 
ನಿನ್ನೆ ಮಂಡಿಸಿದ ಬಜೆಟ್'ನಲ್ಲಿ ಎಲ್ಲರ ಆಕ್ರೋಶಕ್ಕೆ ಗುರಿಯಾದ ಘೋಷಣೆಗಳಲ್ಲಿ ಪ್ರಾವಿಡೆಂಟ್ ಫಂಡ್ ಮೇಲಿನ ತೆರಿಗೆಯದ್ದೂ ಒಂದು. ಪಿಎಫ್ ಹಣ ಹಿಂಪಡೆಯುವಾಗ ಶೇ. 10ರಷ್ಟು ಹಣವನ್ನು ತೆರಿಗೆಯಾಗಿ ಕಟ್ಟಬೇಕು ಎಂದು ವರದಿಗಳು ಪ್ರಕಟವಾಗಿದ್ದವು.  ಪಿಎಫ್ ಹಣಕ್ಕೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ವೆಬ್ದುನಿಯಾವನ್ನು ಓದಿ