ಕೇಜ್ರಿವಾಲ್ ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದರಿಂದ ನಾಲಿಗೆ ಕತ್ತರಿಸಲಾಗಿದೆ: ಪರಿಕ್ಕರ್

ಭಾನುವಾರ, 18 ಸೆಪ್ಟಂಬರ್ 2016 (11:50 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿ ಮತ್ತು ತಮ್ಮ ವಿರುದ್ಧ ಮನಬಂದಂತೆ ಟೀಕೆಗಳನ್ನು ಮಾಡುತ್ತಿರುವುದರಿಂದ ಅವರ ಗಂಟಲನ್ನು ಕತ್ತರಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ 
 
ಏತನ್ಮಧ್ಯೆ, ನಂತರ ತಮ್ಮ ಹೇಳಿಕೆ ವಿವಾದವಾಗಲಿದೆ ಎನ್ನುವುದನ್ನು ಭಾವಿಸಿ ಉಲ್ಟಾ ಹೊಡೆದು ಅವರು ಅನಾರೋಗ್ಯದಿಂದಾಗಿ ರಜೆಯ ಮೇಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
 
ಕೇಜ್ರಿವಾಲ್ ದೆಹಲಿಯಲ್ಲಿ ಪ್ರಧಾನಿ ಮೋದಿಯ ವಿರುದ್ಧ ಹೇಳಿಕೆ ನೀಡುತ್ತಾರೆ. ಗೋವಾದಲ್ಲಿ ನನ್ನ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ. ಇದರಿಂದಾಗಿ ಅವರ ನಾಲಿಗೆ ದೊಡ್ಡದಾಗಿತ್ತು. ಇದೀಗ ಅದನ್ನು ಕತ್ತರಿಸಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
 
ದೆಹಲಿಯಲ್ಲಿ ಚಿಕನ್‌ಗುನ್ಯಾ ಮತ್ತು ಡೆಂಗ್ಯೂ ರೋಗದಿಂದ 40 ಜನರು ಸಾವನ್ನಪ್ಪಿರುವ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ದೆಹಲಿಯಂದ ಕಾಣೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಒಂದು ವೇಳೆ, ನಿಮ್ಮ ಮೊಹಲ್ಲಾ ಕ್ಲಿನಿಕ್‌ಗಳು ಅಷ್ಟು ಪ್ರಭಾವಿಯಾಗಿದ್ದಲ್ಲಿ ಅದು ಹೇಗೆ 40 ಜನರು ಚಿಕನ್‌ಗುನ್ಯಾ ರೋಗದಿಂದ ಸಾವನ್ನಪ್ಪುತ್ತಿದ್ದರು. ಘಟನೆಯಿಂದ ಆಪ್ ಪಕ್ಷದ ಮತ್ತು ಸುಳ್ಳು ಬಹಿರಂಗವಾಗಿದೆ ಎಂದರು.
 
ದೆಹಲಿ ಜನರನ್ನು ವಂಚಿಸಿ ಫಿನ್‌ಲ್ಯಾಂಡ್ ಪ್ರವಾಸದಲ್ಲಿರುವ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿದಂತೆ ಆಪ್ ನಾಯಕರು ವಿಶ್ವಪ್ರವಾಸದಲ್ಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ