ಜೇಟ್ಲಿ ಬ್ಯಾಂಕ್ ಅಕೌಂಟ್ ದಾಖಲೆ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ ಕೇಜ್ರಿವಾಲ್

ಶನಿವಾರ, 25 ಫೆಬ್ರವರಿ 2017 (20:55 IST)
ತಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಬ್ಯಾಂಕ್ ಖಾತೆಯ ವಹಿವಾಟು, ತೆರಿಗೆ ಕಟ್ಟಿರುವ ವಿವರ, ಮತ್ತಿತರ ಹಣಕಾಸು ವ್ಯವಹಾರದ ವಿವರ ನೀಡುವಂತೆ ಕೋರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.


ಜೇಟ್ಲಿ ಮತ್ತು ಅವರ ಕುಟುಂಬ ದೆಹಲಿ ಮತ್ತು ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ನಿನಲ್ಲಿ ಅಕ್ರಮ ಎಸಗಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಆದರೆ, ಈ ಆರೋಪವನ್ನ ತಿರಸ್ಕರಿಸಿದ್ದ ಜೇಟ್ಲಿ 10 ಕೋಟಿ ಪರಿಹಾರ ಕೊಡಿಸುವಂತೆ ಕೋರಿ ಕೇಜ್ರಿವಾಲ್ ಸೇರಿ ಐವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನ 2015ರಲ್ಲಿ ದಾಖಲಿಸಿದ್ದರು ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಪರಿಶೀಲನೆಗಾಗಿ 1999-2000 ಮತ್ತು 2014-15 ಒಳಗಿನ ಜೇಟ್ಲಿ ಮತ್ತವರ ಕುಟುಂಬದ ಹಣಕಾಸು ವ್ಯವಹಾರದ ಮಾಹಿತಿ ನಿಡುವಂತೆ ಕೇಜ್ರಿವಾಲ್ ಕೋರಿದ್ದಾರೆ.

ಅಡ್ವೋಕೇಟ್ ಅನುಪಮ್ ಶ್ರೀವಾಸ್ತವ್ ಮೂಲಕ ಕೇಜ್ರಿವಾಲ್ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ