ಓಟಿಗಾಗಿ ನೋಟು ಹೇಳಿಕೆಯನ್ನು ಪುನರಾರ್ವತಿಸಿದ ಕೇಜ್ರಿವಾಲ್

ಶನಿವಾರ, 24 ಜನವರಿ 2015 (11:57 IST)
ಚುನಾವಣಾ ಆಯೋಗದಿಂದ ನೋಟಿಸ್ ಪಡೆದ ನಂತರವು ಕೂಡ ಆಪ್ ನಾಯಕ ಅರವಿಂದ ಕೇಜ್ರಿವಾಲ್, ಮತದಾರರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹಣ ನೀಡಿದರೆ ಸ್ವೀಕರಿಸಿ ಎಂಬ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ. 
 
ಶುಕ್ರವಾರ ಛತ್ರಪುರ ಮತ್ತು ದೇವಲಿ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಕೇಜ್ರಿವಾಲ್, "ಸದ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಡೆಯವರು ನಿಮಗೆ ಹಣ ನೀಡಲು ಬರಲಿದ್ದಾರೆ. ನೀವು ಆ ಹಣವನ್ನು ನಿರಾಕರಿಸಬೇಡಿ. ಅವರು ನಿಮಗೆ ಅಕ್ಕಿ ಅಥವಾ ಕಂಬಳಿಯನ್ನು ಸಹ ಕೊಡಬಹುದು. ಅವೆಲ್ಲವನ್ನು ಪಡೆದುಕೊಳ್ಳಿ. ಆದರೆ ಮತವನ್ನು ಮಾತ್ರ ಆಮ್ ಆದ್ಮಿ ಪಕ್ಷಕ್ಕೆ ನೀಡಿ", ಎಂದು ಜನರಿಗೆ ಸಲಹೆ ನೀಡಿದ್ದಾರೆ. 
 
ಕಳೆದ ವಾರ ಸಹ ಅವರು ಈ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಜನವರಿ 27 ರವರೆಗೆ ಸ್ಪಷ್ಟೀಕರಣ ನೀಡುವಂತೆ  ಸೂಚಿಸಿದೆ. ಆದರೆ ಈ ಕುರಿತು ತಲೆಕೆಡಿಸಿಕೊಳ್ಳದ ಕೇಜ್ರಿವಾಲ್ ತಮ್ಮ ಮಾತನ್ನು ಪುನರಾವರ್ತಿಸಿದ್ದಾರೆ. 
 
ತಮ್ಮ ಭಾಷಣದ ಸಂದರ್ಭದಲ್ಲಿ ಆಪ್ ನಾಯಕ ಹಣ ಪಡೆಯಿರಿ, ಆದರೆ ಮದ್ಯವನ್ನು ಮಾತ್ರ ಪಡೆಯಬೇಡಿ. ಅದು ಆರೋಗ್ಯಕ್ಕೆ ಅಪಾಯಕಾರಿಯಾದುದು. ಕುಟುಂಬವನ್ನು ಸರ್ವನಾಶಕ್ಕೆ ತಳ್ಳುತ್ತದೆ ಎಂದು ಸಲಹೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ