ದೆಹಲಿಗೆ ರಾಜ್ಯಮಟ್ಟದ ಸ್ಥಾನಮಾನ: ಜನಾಭಿಮತ ಸಂಗ್ರಹಕ್ಕೆ ಮುಂದಾದ ಸಿಎಂ ಅರವಿಂದ್ ಕೇಜ್ರಿವಾಲ್

ಸೋಮವಾರ, 6 ಜುಲೈ 2015 (16:30 IST)
ರಾಜಧಾನಿಗೆ ರಾಜ್ಯದರ್ಜೆಯ ಸ್ಥಾನಮಾನ ಬೇಕೆ ಅಥವಾ ಬೇಡವೇ ಎನ್ನುವ ಬಗ್ಗೆ ಜನಾಭಿಮತ ಪಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ. 
 
ನವದೆಹಲಿಗೆ ನಿಗದಿತ ಅವಧಿಯಲ್ಲಿ ದೀರ್ಘಾವಧಿಯಿಂದ ನೆನೆಗುದಿಯಲ್ಲಿರುವ ರಾಜ್ಯಮಟ್ಟದ ಸ್ಥಾನಮಾನ ನೀಡಬೇಕು ಎನ್ನುವ ಬಗ್ಗೆ ಜನಾಭಿಮತ ಪಡೆದು ವರದಿ ಸಲ್ಲಿಸಿ ನಗರಾಭಿವೃದ್ಧಿ ಇಲಾಖೆಗೆ ಕೇಜ್ರಿವಾಲ್ ಕೋರಿದ್ದಾರೆ. ಆಮ್ ಆದ್ಮಿ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಕೂಡಾ ರಾಜ್ಯಮಟ್ಟದ ಸ್ಥಾನಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿಕೆ ನೀಡಿತ್ತು.   
 
ದೇಶದ ರಾಜಧಾನಿಯಾಗಿರುವ ನವದೆಹಲಿಗೆ ರಾಜ್ಯಮಟ್ಟದ ಸ್ಥಾನ ನೀಡುವ ಕುರಿತಂತೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗುವವರೆಗೆ ರಾಜ್ಯಮಟ್ಟದ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ.  
 
ಬಿಜೆಪಿ ಕೂಡಾ ಚುನಾವಣೆ ಪ್ರಣಾಳಿಕೆಯಲ್ಲಿ ದೆಹಲಿಗೆ ರಾಜ್ಯಮಟ್ಟದ ಸ್ಥಾನಮಾನ ನೀಡಲು ಬದ್ಧ ಎಂದು ಘೋಷಿಸಿದ್ದ ಬಗ್ಗೆ ಸುದ್ದಿಗಾರರು ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಪ್ರಶ್ನಿಸಿದಾಗ, ನವದೆಹಲಿಗೆ ಸಂಪೂರ್ಣ ರಾಜ್ಯಮಟ್ಟದ ಸ್ಥಾನ ನೀಡಬೇಕು ಎನ್ನುವ ಕುರಿತಂತೆ ದೇಶಾದ್ಯಂತ ಒಮ್ಮತದ ಅಭಿಪ್ರಾಯ ವ್ಯಕ್ತವಾಗುವವರೆಗೆ ರಾಜ್ಯಮಟ್ಟದ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.  
 

ವೆಬ್ದುನಿಯಾವನ್ನು ಓದಿ