ಜನರೊಂದಿಗೆ ಸಂಪರ್ಕದಲ್ಲಿರಲು ಫೇಸ್‌ಬುಕ್ ಪೇಜ್ ಆರಂಭಿಸಿದ ಕೇರಳ ಸಿಎಂ

ಶನಿವಾರ, 2 ಜುಲೈ 2016 (19:00 IST)
ರಾಜ್ಯದ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಮತ್ತು ಸರಕಾರದ ನಿರ್ಧಾರಗಳನ್ನು ಹಂಚಿಕೊಳ್ಳಲು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಫೇಸ್‌ಬುಕ್ ಪೇಜ್ ಆರಂಭಿಸಿದ್ದಾರೆ.
 
ಸಿಎಂ ವಿಜಯನ್ ತಮ್ಮ ಕಚೇರಿಯಲ್ಲಿ ಫೇಸ್‌ಬುಕ್ ಪೇಜ್ ಆರಂಭಿಸಿದ್ದು, ಸರಕಾರದ ಮಹತ್ವದ ನಿರ್ಧಾರಗಳು ಮತ್ತು ಹೊಸ ಯೋಜನೆಗಳ ಬಗ್ಗೆ ಜನತೆ ತಿಳಿದುಕೊಂಡು ಸಲಹೆ ಸೂಚನೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.  
 
ಒಂದು ವಾರದ ಹಿಂದೆ ಫೇಸ್‌ಬುಕ್ ಪೇಜ್ ಸೃಷ್ಟಿಸಿದ್ದರೂ ನಿನ್ನೆ ಸಿಎಂ ವಿಜಯನ್ ಶುಭಾರಂಭ ಮಾಡಿದ್ದಾರೆ.  
 
ಫೇಸ್‌ಬುಕ್‌ನಲ್ಲಿ ಮೊದಲ ಬಾರಿಗೆ ಪೋಸ್ಟ್ ಮಾಡಿದ ಸಿಎಂ ವಿಜಯನ್, ಜನತೆಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮತ್ತು ಸಚಿವಾಲಯದ ಮುಂದೆ ಎದುರಾಗುವ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಸರಕಾರದ ಸಾಧನೆಗಳು ಮತ್ತು ಎದುರಾಗುವ ಸಮಸ್ಯೆಗಳ ಬಗ್ಗೆ ಜನತೆ ಸಲಹೆ ಸೂಚನೆಗಳನ್ನು ಕೊಡಬಹುದಾಗಿದೆ ಎಂದು ಮನವಿ ಮಾಡಿದ್ದಾರೆ.
 
ಸಿಎಂ ವಿಜಯನ್ ಅಧಿಕಾರಕ್ಕೆ ಬಂದು ಒಂದು ತಿಂಗಳ ಅವಧಿಯಲ್ಲಿ ಹಲವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅವರ ಫೇಸ್‌ಬುಕ್ 88,614 ಲೈಕ್‌ಗಳನ್ನು ಪಡೆದಿದೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ