ಸಂಕಷ್ಟದಲ್ಲಿ ಕೇರಳ ಸಿಎಂ: ಎಫ್‌ಐಆರ್ ದಾಖಲಿಸುವಂತೆ ಕೋರ್ಟ್ ಸೂಚನೆ

ಗುರುವಾರ, 28 ಜನವರಿ 2016 (16:02 IST)
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಸೋಲಾರ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಚಾಂಡಿ ಮತ್ತು ಇಂಧನ ಸಚಿವ ಆರ್ಯದನ್ ಮೊಹಮ್ಮದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ತ್ರಿಶೂರ್ ವಿಜಿಲೆನ್ಸ್ ಕೋರ್ಟ್ ಗುರುವಾರ ಆದೇಶಿಸಿದೆ. 

ಸೋಲಾರ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್, ಮುಖ್ಯಮಂತ್ರಿ ಉಮನ್ ಚಾಂಡಿ ಮತ್ತು ಇಂಧನ ಸಚಿವರಿಗೆ ಲಂಚ ನೀಡಿರುವುದಾಗಿ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದರು. ಚಾಂಡಿಯವರ ಆಪ್ತ ಸಹಾಯಕರಿಗೆ ರೂ.1.90 ಕೋಟಿ ಮತ್ತು ಮೊಹಮ್ಮದ್ ಅವರಿಗೆ 40 ಲಕ್ಷ ಲಂಚ ನೀಡಿರುವುದಾಗಿ ಅವರು ಬಾಂಬ್ ಸಿಡಿಸಿದ್ದರು. ಆದರೆ ಇಬ್ಬರು ಸಹ ಆರೋಪವನ್ನು ನಿರಾಕರಿಸಿದ್ದಾರೆ.
 
ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ತ್ರಿಶೂರ್ ವಿಜಿಲೆನ್ಸ್ ಕೋರ್ಟ್, ಉಮನ್ ಚಾಂಡಿ ಹಾಗೂ ಇಂದನ ಸಚಿವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ. 
 

ವೆಬ್ದುನಿಯಾವನ್ನು ಓದಿ