ಆರೆಸ್ಸೆಸ್ ಮುಖಂಡನ ಹತ್ಯೆಗೈದ ಸಿಪಿಎಂ ನಾಯಕನಿಗೆ ಜಾಮೀನು

ಬುಧವಾರ, 23 ಮಾರ್ಚ್ 2016 (19:59 IST)
ತಿರುವನಂತಪುರಮ್: ಆರೆಸ್ಸೆಸ್ ಕಾರ್ಯಕರ್ತ ಕಥೀರೂರ್ ಮನೋಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿಪಿಎಂ ಪಕ್ಷದ ಕನ್ನೂರ್ ಜಿಲ್ಲಾ ಕಾರ್ಯದರ್ಶಿ ಜಯರಾಜನ್‌ಗೆ ಜಾಮೀನು ನೀಡಲಾಗಿದೆ.
ಕಥೀರೂರ್ ಮನೋಜ್ ಕೊಲೆ ಪ್ರಕರಣ ಸಂಬಂಧಿಸಿದಂತೆ ಫೆಬ್ರುವರಿ 12 ರಂದು ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಜಯರಾಜನ್‌‌ಗೆ ಎರಡು ತಿಂಗಳು ಕನ್ನೂರ್ ಜಿಲ್ಲೆಗೆ ಭೇಟಿ ನೀಡದಂತೆ ನಿರ್ಬಂಧ ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
 
ಏತನ್ಮಧ್ಯೆ ಸಿಪಿಎಂ ಪಕ್ಷ, ಪ್ರಕರಣ ಕುರಿತಂತೆ ಬಿಜೆಪಿ ಮತ್ತು ಆರೆಸ್ಸೆಸ್ ರಾಜಕೀಯ ಪಿತೂರಿ ನಡೆಸಿದ್ದು, ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಪ್ರತಿಪಾದಿಸಿದೆ. ಪ್ರಸ್ತುತ ಉಪಾ ಕಾಯ್ದೆಯಡಿಯಲ್ಲಿ ಬಂಧಿತರಾಗಿರುವ ಆರೋಪಿ, ಪಿ ಜಯರಾಜನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
1999 ರಲ್ಲಿ ಮನೋಜ್, ಜಯರಾಜನ್‌ ಕೊಲೆಗೆ ಸಂಚು ರೂಪಿಸಿ ವಿಫಲನಾಗಿದ್ದ, ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ನಾಯಕ ಮನೋಜ್ ಸೆಪ್ಟೆಂಬರ್ 1, 2014 ರಂದು ಕೊಲೆಯಾಗಿದ್ದರು.
 

ವೆಬ್ದುನಿಯಾವನ್ನು ಓದಿ