ಪ್ರತಿಭಟನೆ ಮಾಡುವ ನೆಪದಲ್ಲಿ ಕರುವನ್ನು ಸಾರ್ವಜಿಕವಾಗಿ ಕೊಂದು ತಿಂದರು!

ಸೋಮವಾರ, 29 ಮೇ 2017 (11:57 IST)
ಕೊಚ್ಚಿ: ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಗೋ ಹತ್ಯೆ ನಿಷೇಧ ಮಾಡಿರುವುದರ ವಿರುದ್ಧ ಕೇರಳದಲ್ಲಿ ಯೂಥ್ ಕಾಂಗ್ರೆಸ್ ಸದಸ್ಯರು ವಿನೂತನವಾಗಿ ಪ್ರತಿಭಟಿಸಲು ಹೋಗಿ ಅಮಾನತುಗೊಂಡಿದ್ದಾರೆ.

 
ಯೂಥ್ ಕಾಂಗ್ರೆಸ್ ನ ಕಣ್ಣೂರು ಮಂಡಲದ ಅಧ್ಯಕ್ಷ  ರಜೀಲ್ ಮೂಕುಟ್ಟಿ ಸೇರಿದಂತೆ ಮೂವರನ್ನು ಕಾಂಗ್ರೆಸ್ ಪಕ್ಷ ಅಮಾನತುಗೊಳಿಸಿದೆ. ಅಷ್ಟಕ್ಕೂ ಇವರು ಮಾಡಿದ್ದೇನು ಗೊತ್ತಾ?

18 ತಿಂಗಳ ಕರುವನ್ನು ಸಾರ್ವಜನಿಕವಾಗಿ ಕೊಂದಿದ್ದಲ್ಲದೆ, ಕೊಚ್ಚಿಯ ಬಿಜೆಪಿ ಕಚೇರಿಯ ಎದುರು ಅದರ ಮಾಂಸದೂಟ ಮಾಡಿ ಪ್ರತಿಭಟನೆ ಮಾಡಿದ್ದರು. ಈ ಕೃತ್ಯದ ಬಗ್ಗೆ ಸ್ವತಃ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಖಂಡನೆ ವ್ಯಕ್ತಪಡಿಸಿದ್ದರು.

ಅಲ್ಲದೆ, ಇಂತಹ ಹೇಯ ಕೃತ್ಯವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದಿದ್ದರು. ಅದರಂತೆ ಇದೀಗ ಮೂವರನ್ನು ಅಮಾನತುಗೊಳಿಸಲಾಗಿದೆ. ಪ್ರತಿಭಟನೆಗೆ ಇಂತಹ ಮಾರ್ಗ ಅನುಸರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ