ಮೋದಿ ಅರಬ್ ರಾಷ್ಟ್ರಗಳಿಗೆ ಭೇಟಿ ನೀಡಲು ಮೀನಾಮೇಷ : ಕಾಂಗ್ರೆಸ್ ಲೇವಡಿ

ಸೋಮವಾರ, 25 ಮೇ 2015 (17:36 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಒಂದು ವರ್ಷದ ಅವಧಿಯಲ್ಲಿ ಅರಬ್ ರಾಷ್ಟ್ರಗಳಿಗೆ ಯಾಕೆ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
 
ಭಾರತ ದೇಶ ಅರಬ್ ರಾಷ್ಟ್ರಗಳ ತೈಲದ ಮೇಲೆ ಅವಲಂಬಿತವಾಗಿದೆ. ಆದಾಗ್ಯೂ ಮೋದಿ ತೈಲ ಸಂಪತ್ಭರಿತ ರಾಷ್ಟ್ರಗಳನ್ನು ಕಡೆಗೆಣಿಸುತ್ತಿರುವುದು ಅನುಮಾನ ಮೂಡಿಸುತ್ತಿದೆ ಎಂದು ಹೇಳಿದ್ದಾರೆ. 
 
ಪ್ರಧಾನಮಂತ್ರಿ ಮೋದಿ ಅಮೆರಿಕ, ಫ್ರಾನ್ಸ್ , ಜಪಾನ್, ಚೀನಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ಹಲವು ಯುರೋಪ್ ರಾಷ್ಟಗಳಿಗೆ ಭೇಟಿ ನೀಡಿದ್ದಾರೆ.ಆದರೆ, ನಮ್ಮ ದೇಶಕ್ಕೆ ತೈಲ ಮತ್ತು ನೈಸರ್ಗಿಕ ಅನಿಲವನ್ನು ರಫ್ತು  ಮಾಡುವ ರಾಷ್ಟ್ರಗಳಿಗೆ ಭೇಟಿ ನೀಡಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕೂಡಾ ಭಾರತ ಹೆಚ್ಚಿನ ಹೂಡಿಕೆ ಮಾಡಿದೆ. ಆದರೆ, ಮೋದಿ ಇಂತಹ ರಾಷ್ಟ್ರಗಳಿಗೆ ಭೇಟಿ  ನೀಡದಿರುವುದು ವಿಷಾದಕರ ಸಂಗತಿ ಎಂದರು.
 
ಮೋದಿ ವಿದೇಶ ಪ್ರವಾಸದಲ್ಲಿರುವಾಗ ಭಾರತ ಒಂದು ಹಗರಣಗಳ ರಾಷ್ಟ್ರವಾಗಿತ್ತು. ಭಾರತದಲ್ಲಿ ಹುಟ್ಟಿರುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಭಾರತೀಯರು ಅಭಿಪ್ರಾಯ ಪಟ್ಟಿದ್ದಾರೆ ಎನ್ನುವ ಹೇಳಿಕೆ ದೇಶಕ್ಕೆ ಅವಮಾನ ತರುವಂತಹದು ಎಂದು ಗುಡುಗಿದ್ದಾರೆ.
 
ಕೇವಲ ಒಂದು ವರ್ಷದ ಅವಧಿಯಲ್ಲಿ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಪರಿವರ್ತನೆಯಾಯಿತೇ. ಒಂದು ಮಗು ಜನಿಸಲು ತಾಯಿಯ ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಕಳೆಯುತ್ತದೆ ಎಂದು ಲೇವಡಿ ಮಾಡಿದರು. 
 

ವೆಬ್ದುನಿಯಾವನ್ನು ಓದಿ