ದೆಹಲಿಯಲ್ಲಿ ಕಿಡ್ನಿ ರಾಕೆಟ್ ಪತ್ತೆ : ಅಪೋಲೋ ಆಸ್ಪತ್ರೆಯ ವೈದ್ಯರು ಸೇರಿ ಐವರ ಬಂಧನ
ಶುಕ್ರವಾರ, 3 ಜೂನ್ 2016 (19:54 IST)
ದೆಹಲಿಯಲ್ಲಿ ಕಿಡ್ನಿ ರಾಕೆಟ್ ನಡೆಸುತ್ತಿರುವ ಆರೋಪದ ಮೇಲೆ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿದಂತೆ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅಪೋಲೋ ಆಸ್ಪತ್ರೆಯಲ್ಲಿ ಕಿಡ್ನಿ ರಾಕೆಟ್ ವ್ಯವಹಾರ ನಡೆಯುತ್ತಿದೆ ಎನ್ನುವ ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಯ ಮೇಲೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಧ್ಯವರ್ತಿಯಾಗಿದ್ದ ಆಸಿಮ್ ಎನ್ನುವ ವ್ಯಕ್ತಿ ಸತ್ಯಪ್ರಕಾಶ್ ಮತ್ತು ದೇಬಶಿಶ್ ಎನ್ನುವವರು ಕಿಡ್ನಿ ಕೊಡಲು ಮುಂದಾಗಿದ್ದಾರೆ ಎಂದು ಅಪೋಲೋ ಆಸ್ಪತ್ರೆಯ ಸಿಬ್ಬಂದಿಗಳಾದ ಆದಿತ್ಯ ಮತ್ತು ಶೈಲೇಶ್ ಎನ್ನುವವರಿಗೆ ಮಾಹಿತಿ ನೀಡಿದಾಗ ಹಣ ಕೊಟ್ಟು ಕಿಡ್ನಿ ಖರೀದಿಸಲು ಮುಂದಾಗಿದ್ದಾರೆ.
ಕಿಡ್ನಿ ದಾನಿಗಳು ಕೇವಲ 3-4 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಪಡೆದರೆ, ಆಸ್ಪತ್ರೆಯ ವೈದ್ಯರು ಕಿಡ್ನಿಗಳನ್ನು 25 ರಿಂದ 30 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಮಧ್ಯವರ್ತಿಯಾಗಿದ್ದ ಆಸೀಮ್‌ಗೆ 1-2 ಲಕ್ಷ ರೂಪಾಯಿಗಳು ದೊರೆತಿವೆ.
ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಐದು ಬಾರಿ ಅಕ್ರಮವಾಗಿ ಕಿಡ್ನಿ ಮಾರಾಟದ ವ್ಯವಹಾರಗಳು ನಡೆದಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.