ಕಿರಣ್ ಬೇಡಿ ಜೀವನಪೂರ್ತಿ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಧೀಮಂತೆ: ಅಮಿತ್ ಶಾ

ಭಾನುವಾರ, 25 ಜನವರಿ 2015 (14:08 IST)
ದೆಹಲಿ ವಿಧಾನಸಭಾ ಚುನಾವಣೆ ಗೆಲ್ಲಲು ಕಿರಣ್ ಬೇಡಿ ಅವರನ್ನು ಎರವಲು ಪಡೆಯಲಾಗಿದೆ ಹಾಗೂ 'ಭ್ರಷ್ಟಾಚಾರದ ವಿರುದ್ಧ ಭಾರತ' ಚಳವಳಿಯಲ್ಲಿ ಕೇಸರಿ ಪಕ್ಷದ ವಿರುದ್ಧ ಆರೋಪ ಮಾಡದಂತೆ ಅಣ್ಣಾ ಹಜಾರೆ ಅವರಿಗೆ ಕಿರಣ್ ಬೇಡಿ ಹೇಳಿದ್ದರು ಎಂಬ ವಿವಾದಗಳನ್ನು ಬಿಜೆಪಿ ಅಲ್ಲಗೆಳೆದಿದೆ.
 
"ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವುದು ಬಿಜೆಪಿ ಪಕ್ಷದ ಒಲವು. ಕಿರಣ್ ಬೇಡಿ ಅಂತಹ ಒಂದು ಉದಾಹರಣೆ" ಎಂದು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವರದಿಗಾರರಿಗೆ ತಿಳಿಸಿದ್ದಾರೆ.
 
'ಭ್ರಷ್ಟಾಚಾರದ ವಿರುದ್ಧ ಭಾರತ' ಚಳವಳಿಯಲ್ಲಿ ಕೇಸರಿ ಪಕ್ಷದ ವಿರುದ್ಧ ಆರೋಪ ಮಾಡದಂತೆ ಅಣ್ಣಾ ಹಜಾರೆ ಅವರಿಗೆ ಕಿರಣ್ ಬೇಡಿ ಹೇಳಿದ್ದರು ಎಂಬ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, 'ಭ್ರಷ್ಟಾಚಾರದ ವಿರುದ್ಧ ಭಾರತ' ಆಮ್ ಆದ್ಮಿ ಪಕ್ಷವಾಗಿರಲಿಲ್ಲ ಎಂದಿದ್ದಾರೆ ಷಾ.
 
ಕಿರಣ್ ಬೇಡಿಯವರನ್ನು ಪ್ರಶಂಸಿಸಿರುವ ಷಾ "ತನ್ನ ಜೀವನಪೂರ್ತಿ ಭ್ರಷ್ಟಾಚಾರದ ವಿರುದ್ಧ ಹೋರಾಡಿರುವ ಧೀಮಂತ ಪೊಲೀಸ್ ಅಧಿಕಾರಿ ಅವರು" ಎಂದಿದ್ದಾರೆ.
 
"ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಕೆಲಸ ಅವರು ಮಾಡಿರುವುದರಿಂದ ದೆಹಲಿಯ ಮಹಿಳೆಯರು ಅವರ ಜೊತೆಗಿದ್ದಾರೆ" ಎಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ