ಮುಸ್ಲಿಂ ಮಹಿಳೆಯರ ಬಗ್ಗೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಏನು ಹೇಳಿದ್ದಾರೆ ಗೊತ್ತಾ?

ಶನಿವಾರ, 16 ಏಪ್ರಿಲ್ 2016 (15:55 IST)
ಹಿಂದು ಧರ್ಮದ ಕುರಿತಂತೆ ಮಧ್ಯಪ್ರವೇಶಿಸುವ ನ್ಯಾಯಾಂಗ ಮುಸ್ಲಿಂ ಧರ್ಮದ ಬಗ್ಗೆ ಕೂಡಾ ಮಧ್ಯಪ್ರವೇಶಿಸಬೇಕು ಎಂದು ವಿವಾದಾತ್ಮಕ ಹೇಳಿಕೆಗಳಿಂದ ಖ್ಯಾತರಾಗಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮನವಿ ಮಾಡಿದ್ದಾರೆ.
 
ಧಾರ್ಮಿಕ ಸ್ಥಳಗಳಲ್ಲಿ ಪುರುಷರು ಮತ್ತು ಮಹಿಳೆಯರ ಪ್ರವೇಶ ಕುರಿತಂತೆ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಮಹಿಳೆಯರನ್ನು ಕಾಲಿನ ಚಪ್ಪಲಿ ಎಂದು ತಿಳಿದು ಮನಬಂದಾಗ ಹಾಕಿಕೊಳ್ಳುವುದು ಇಲ್ಲವಾದಲ್ಲಿ ಕಿತ್ತೊಗೆಯುವಂತಹ ವಾತಾವರಣವಿರುವುದರಿಂದ ನ್ಯಾಯಾಂಗ ಮಧ್ಯಪ್ರವೇಶಿಸಬೇಕು ಎಂದು ಕೋರಿದರು.
 
ಮುಸ್ಲಿಂ ಮಹಿಳೆಯರು ತಾಯಂದಿರು ಮತ್ತು ಸಹೋದರಿಯರಿದ್ದಂತೆ. ಅವರು ತುಂಬಾ ಅನ್ಯಾಯ ಸಹಿಸುತ್ತಿದ್ದಾರೆ. ಮಹಿಳೆಯರಿಗೆ ಕೂಡಾ ನಮಾಜ್ ಮಾಡಲು ಅವಕಾಶ ಕೊಡಬೇಕು. ಹಿಂದೂಗಳ ವಿಷಯದಲ್ಲಿ ಮಧ್ಯಪ್ರವೇಶಿಸುವ ನ್ಯಾಯಾಂಗ ಇಸ್ಲಾಂ ಧರ್ಮದ ವಿಷಯದಲ್ಲೂ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ ಎಂದರು.  
 
ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಮಾನ ಹಕ್ಕುಗಳಿವೆ ಎಂದು ಹೇಳಿರುವಾಗ ದೇಶ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕೆ ಹೊರತು ಫತ್ವಾ ಆದೇಶದ ಮೇಲೆಯಲ್ಲ. ಸರಕಾರ ಮತ್ತು ನ್ಯಾಯಾಂಗ ಈ ವಿಷಯದತ್ತ ಗಮನಹರಿಸಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ