ನಾಯಿಯ ಮೇಲೆ ಅತ್ಯಾಚಾರ: ಆರೋಪಿ ಸುಳಿವು ನೀಡಿದರೆ 1 ಲಕ್ಷ ಬಹುಮಾನ

ಶುಕ್ರವಾರ, 19 ಫೆಬ್ರವರಿ 2016 (12:50 IST)
ಪೈಶಾಚಿಕ ಮನಸ್ಥಿತಿಯ ಕಾಮುಕನೊಬ್ಬ ನಾಯಿಯ ಮೇಲೆ ಅತ್ಯಾಚಾರ ಎಸಗಿದ ಹೇಯ ಘಟನೆ ಕೊಚ್ಚಿಯಲ್ಲಿ ನಡೆದಿದೆ. ಈ ಕುರಿತು ದೂರು ದಾಖಲಾಗಿದೆ ಎಂದು ಡಿಜಿಪಿ ಟಿ.ಪಿ.ಸೇನುಕುಮಾರ್ ಹೇಳಿದ್ದಾರೆ. 
 
ಈ ಕೃತ್ಯದ ವಿಡಿಯೋ ವಾಟ್ಸಪ್‌ನಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ಆರೋಪಿಯ ಸುಳಿವು ನೀಡಿದರೆ 1,00,000 ಬಹುಮಾನ ನೀಡುವುದಾಗಿ ಪ್ರಾಣಿ ಹಕ್ಕುಗಳ ಸಂಘಟನೆಯವರು ಘೋಷಿಸಿದ್ದಾರೆ
 
ಈ ಕೃತ್ಯ ನಡೆದಿದ್ದೆಲ್ಲಿ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಆರೋಪಿಗಳು ಮಲಯಾಳಂ ಭಾಷೆಯಲ್ಲಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ಕೇಳಿ ಬಂದಿದ್ದು ಇದು ಕೇರಳದಲ್ಲಿಯೇ ನಡೆದ ಘಟನೆ ಎಂದು ಶಂಕಿಸಲಾಗಿದೆ. 
 
ಹಳೆಯ ಕಟ್ಟಡವೊಂದರಲ್ಲಿ ಅಸಹಾಯಕ ನಾಯಿಯನ್ನು ಬಲವಂತವಾಗಿ ಹಿಡಿದುಕೊಂಡು ಲೈಂಗಿಕ ದೌರ್ಜನ್ಯವೆಸಗುತ್ತಿರುವುದು ಎರಡು ನಿಮಿಷದ ವಿಡಿಯೋದಲ್ಲಿ ಕಂಡುಬರುತ್ತಿದೆ. 
 
ಅನಾಗರಿಕ ಕೃತ್ಯದ ಬಳಿಕ ನಾಯಿ ಗಂಭೀರವಾದ ದೈಹಿಕ ಮತ್ತು ಮಾನಸಿಕ ಆಘಾತಕ್ಕೆ ಒಳಗಾಗಿರುತ್ತದೆ. ಇಂತಹ ದುಷ್ಕೃತ್ಯಗಳು ಮತ್ತೆ ಮರುಕಳಿಸಬಾರದು. ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಪ್ರಾಣಿ ಹಕ್ಕುಗಳ ಸಂಘಟನೆ ಒತ್ತಾಯಿಸಿದೆ. 

ವೆಬ್ದುನಿಯಾವನ್ನು ಓದಿ