ಕೊಟ್ಟೂರೇಶ್ವರ ರಥ ಪತನ: ಭಕ್ತರ ರಕ್ಷಣೆಗೆ ನಡೆದಿತ್ತು ಪವಾಡ

ಸೋಮವಾರ, 6 ಮಾರ್ಚ್ 2017 (14:41 IST)
ಕಳೆದ ಕೆಲ ದಿನಗಳ ಹಿಂದೆ ಬಳ್ಳಾರಿಯ ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ನೆಲಕ್ಕಪ್ಪಳಿಸಿದ ಘಟನೆ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಅಷ್ಟು ದೊಡ್ಡ ರಥ ಬಿದ್ದರೂ ಗಂಭೀರ ಅಪಾಯವಾಗದಿದ್ದುದು ಎಲ್ಲರನ್ನು ಆಶ್ಚರ್ಯಕ್ಕೆ ತಳ್ಳಿತ್ತು. ಈ ಮಹಾ ಅವಘಡ ನಡೆದರೂ ಯಾವುದೇ ಪ್ರಾಣಾಪಾಯ ಸಂಭವಿಸದೇ ಇರುವುದಕ್ಕೆ ಕೊಟ್ಟೂರೇಶ್ವರನ ಪವಾಡವೇ ಕಾರಣ ಎಂದು ಜನರೀಗ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ದೇವರು ತನ್ನ ಭಕ್ತರನ್ನು ಹೇಗೆ ಕಾಪಾಡಿದನಂತೆ ಗೊತ್ತಾ? 
 
ರಥ ಬೀಳುವ ಕೆಲ ನಿಮಿಷದ ಮೊದಲು ದೇವಸ್ಥಾನಕ್ಕೆ ಸೇರಿದ್ದ ಗೂಳಿಯೊಂದು ರಥದ ಬಳಿ ನಿಂತಿದ್ದ ಜನರ ಗುಂಪಿಗೆ ನುಗ್ಗಿತ್ತು. ಬೆದರಿದ ಭಕ್ತರು ಅಲ್ಲಿಂದ ಓಡಿದ್ದರು. ಬಳಿಕ ರಥ ನೆಲಕ್ಕಪ್ಪಳಿಸಿದೆ. ಹೀಗಾಗಿ ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ. 
 
ಇದನ್ನು ದೈವ ಕೃಪೆ ಎಂದು ಭಾವಿಸಿರುವ ಜನರೀಗ ಬಸವನ ಆರಾಧನೆಯಲ್ಲಿ ತೊಡಗಿದ್ದಾರೆ. 

ವೆಬ್ದುನಿಯಾವನ್ನು ಓದಿ