ವ್ಯಾಪಂ ಹಗರಣ: ಸುಪ್ರೀಂಕೋರ್ಟ್ ಮೊರೆಹೋದ ಆಪ್ ನಾಯಕ ಕುಮಾರ್ ವಿಶ್ವಾಸ್

ಸೋಮವಾರ, 6 ಜುಲೈ 2015 (20:37 IST)
ವ್ಯಾಪಂ ಹಗರಣದ ತನಿಖೆಯ ಮೇಲ್ವಿಚಾರಣೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿತ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.
 
ಮಧ್ಯಪ್ರದೇಶದಲ್ಲಿ ವಿಶೇಷ ತನಿಖಾ ತಂಡ ವ್ಯಾಪಂ ಹಗರಣಅದ ತನಿಖೆ ನಡೆಸುತ್ತಿದ್ದರೂ ಹಗರಣಕ್ಕೆ ಸಂಬಂಧಿಸಿದಂತೆ 45 ಅಸಹಜ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ, ವ್ಯಾಪಂ ಹಗರಣದ ತನಿಖೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡು ಶೀಘ್ರ ತನಿಖೆಗೆ ಆದೇಶಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
 
ವ್ಯಾಪಂ ಹಗರಣ ಬಗ್ಗೆ ತನಿಖಾ ವರದಿ ನೀಡುತ್ತಿದ್ದ ಆಜ್ ತಕ್ ಚಾನೆಲ್‌ನ ವರದಿಗಾರ ಅಕ್ಷಯ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನ ಡೀನ್ ಅರುಣ್ ಶರ್ಮಾ ಅಸಹಜ ಸಾವಿಗೀಡಾಗಿದ್ದಕ್ಕೆ ಕುಮಾರ್ ಸಂತಾಪ ಸೂಚಿಸಿದ್ದಾರೆ. 
 
ವ್ಯಾಪಂ ಹಗರಣದ ಬಗ್ಗೆ ತನಿಖೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿದೆ. ಇದರಿಂದ ಇತರ ಹಗರಣಗಳ ಅಸಹಜ ಸಾವಿನ ಸರಣಿಯನ್ನು ತಡೆಯಬಹುದಾಗಿದೆ ಎಂದರು. 
 
ಮಧ್ಯಪ್ರದೇಶದ ವೃತ್ತಿ ಪ್ರವೇಶ ಪರೀಕ್ಷೆಯ ಹಗರಣಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳು ಭಾಗಿಯಾಗಿರುವುದು ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ. 
 

ವೆಬ್ದುನಿಯಾವನ್ನು ಓದಿ