ಲಾಲಾ ಲಜಪತರಾಯ್ ಜನ್ಮಸ್ಥಳ ಪಂಜಾಬ್‌ನ ಪ್ರಥಮ ಡಿಜಿಟಲ್ ಇಂಡಿಯಾ ಗ್ರಾಮ

ಶುಕ್ರವಾರ, 9 ಅಕ್ಟೋಬರ್ 2015 (17:05 IST)
ಪಂಜಾಬ್ ಕೇಸರಿ ಎಂದೇ ಪ್ರಖ್ಯಾತರಾಗಿದ್ದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯ್ ಅವರ ಜನ್ಮ ಸ್ಥಳವಾದ ಧುಡಿಕ್ ಪಂಜಾಬ್​ನ ಮೊದಲ ಡಿಜಿಟಲ್ ಗ್ರಾಮವೆಂಬ ಹೆಗ್ಗಳಿಕೆಯನ್ನು ಗಿಟ್ಟಿಸಿಕೊಂಡಿದೆ. ಯೋಜನೆಯ ಹಿರಿಯ ಅಧಿಕಾರಿಗಳು ಇದನ್ನು ಸ್ಪಷ್ಟ ಪಡಿಸಿದ್ದಾರೆ.
 
ಜಿಲ್ಲಾಧಿಕಾರಿ ಪರ್ಮಿಂದರ್ ಸಿಂಗ್ ಗಿಲ್ ಲಾಲಾ ಲಜಪತ್ ರಾಯ್ ಅವರ ಪೂರ್ವಿಕರ ಗ್ರಾಮದಲ್ಲಿ ಧುಡಿಕ್ ಗ್ರಾಮದಲ್ಲಿ ವೈ ಫೈ ಅಂತರ್ಜಾಲ ಸೌಲಭ್ಯವನ್ನು ಉದ್ಘಾಟಿಸುವ ಮೂಲಕ ಡಿಜಿಟಲ್ ಇಂಡಿಯಾಗೆ ಚಾಲನೆ ನೀಡಿದರು.
 
'ಪಂಜಾಬ್ ನ್ಯಾಷನಲ್ ಬ್ಯಾಂಕ್​ ಸಹಕಾರದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ,' ಎಂದು ಜಿಲ್ಲಾಧಿಕಾರಿ ಪರ್ಮಿಂದರ್ ಸಿಂಗ್ ಗಿಲ್ ತಿಳಿಸಿದ್ದಾರೆ.
 
ಲಾಲಾ ಲಜಪತ್ ರಾಯ್ ಅವರು ಸ್ಥಾಪಿಸಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಧುಡಿಕ್ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದು, ಅಲ್ಲಿ ಶಾಲೆ, ಹೊಲಿಗೆ ತರಬೇತಿ ಕೇಂದ್ರ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರವನ್ನು ಸಹ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ