ಸರಕಾರಿ ಆಸ್ತಿಯಾದ ಅರಮನೆಯನ್ನು ನುಂಗುವ ಸಂಚು ರೂಪಿಸಿದ್ದ ವಸುಂಧರಾ ರಾಜೇ,ಲಲಿತ್ ಮೋದಿ: ಕಾಂಗ್ರೆಸ್

ಸೋಮವಾರ, 29 ಜೂನ್ 2015 (16:52 IST)
ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಕಳಂಕಿತ ಹವಾಲಾ ಆರೋಪಿ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಬಿಜಿನೆಸ್ ಪಾಲುದಾರರಾಗಿದ್ದು, ಸರಕಾರಿ ಆಸ್ತಿಯನ್ನು ಸ್ವಂತದ ಐಷಾರಾಮಿ ಹೋಟೆಲ್‌ಗಳಾಗಿ ಪರಿವರ್ತಿಸುವ ಸಂಚು ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. 
 
ಸರಕಾರಿ ಆಸ್ತಿಯಾದ ಢೋಲಪುರ್ ಅರಮನೆಯನ್ನು ಐಷಾರಾಮಿ ಹೋಟೆಲ್‌ನ್ನಾಗಿ ಪರಿವರ್ತಿಸುವ ಸಂಚು ರೂಪಿಸಿದ್ದರು. ಅರಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡ ದಾಖಲೆಗಳು ಅವರ ಬಳಿಯಿವೆ ಎಂದು ಕಿಡಿಕಾರಿದೆ. 
 
ಮೊದಲನೇಯದಾಗಿ ಲಲಿತ್ ಮೋದಿ ಮತ್ತು ರಾಜೇ ವಹಿವಾಟು ಪಾಲುದಾರರು, ಎರಡನೇಯದಾಗಿ ಲಲಿತ್ ಮೋದಿ ಮಾರಿಷಿಯಸ್ ಬ್ಯಾಂಕ್‌ನಿಂದ 21 ಕೋಟಿ ರೂಪಾಯಿಗಳನ್ನು ರಾಜೇ ಪುತ್ರ ದುಶ್ಯಂತ್ ಸಿಂಗ್ ಖಾತೆಗೆ ವರ್ಗಾವಣೆ, ಮೂರನೇಯದು ಲಲಿತ್ ಮೋದಿ ಇಂಗ್ಲೆಂಡ್ ಪ್ರಯಾಣದ ದಾಖಲೆಗಳಿಗೆ ಸಹಿಹಾಕಿರುವುದು. ನಾಲ್ಕನೇಯದ್ದು ಇಂದು ಬಹಿರಂಗವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.  
 
ಲಲಿತ್ ಮೋದಿ ಮತ್ತು ವಸುಂಧರಾ ರಾಜೇ ಸರಕಾರಿ ಆಸ್ತಿಯನ್ನು ಹೇಗೆ ತಮ್ಮ ಸ್ವಂತ ಆಸ್ತಿಯನ್ನು ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ದಾಖಲೆಗಳನ್ನು ಇಂದು ಬಿಡುಗಡೆ ಮಾಡಲಾಗುವುದು  ಎಂದು ತಿಳಿಸಿದ್ದಾರೆ.
 
1954 ರಲ್ಲಿ ಢೋಲಪುರ್ ಅರಮನೆಯ ಸಂಸ್ಥಾನ 1977ರಲ್ಲಿ ಸರಕಾರದೊಂದಿಗೆ ವಿಲೀನವಾಯಿತು. ಸರಕಾರದೊಂದಿಗೆ ವಿಲೀನವಾದ ನಂತರ ಅರಮನೆ ಸರಕಾರಿ ಆಸ್ತಿಯಾಗಿ ಹೊರಹೊಮ್ಮಿತು. ಡೋಲ್‌ಪುರ್ ಅರಮನೆ ಸರಕಾರಿ ಆಸ್ತಿ ಎಂದು ತಿಳಿದಿದ್ದರೂ ಕೂಡಾ ರಾಜೇ ಮತ್ತು ಲಲಿತ್ ಮೋದಿ ಅದನ್ನು ಐಷಾರಾಮಿ ಹೋಟೆಲ್‌ ಆಗಿ ಪರಿವರ್ತಿಸುವ ಸಂಚು ರೂಪಿಸಿದ್ದರು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ