ದಾವೂದ್‌ನಿಂದ ಪ್ರಾಣಬೆದರಿಕೆ; ಇಂಗ್ಲೆಂಡ್‌ನಿಂದ ಗಡೀಪಾರಾಗುವುದರಿಂದ ಬಚಾವಾಗಿರುವ ಲಲಿತ್

ಸೋಮವಾರ, 29 ಜೂನ್ 2015 (16:21 IST)
ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಡದ ಪ್ರಾಣ ಬೆದರಿಕೆ ಹಾಗೂ ಕೇಂದ್ರ ಸರಕಾರ ಭದ್ರತೆಯನ್ನು ಕಡಿತಗೊಳಿಸಿದ್ದರಿಂದ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಇಂಗ್ಲೆಂಡ್‌‌ಗೆ ಪರಾರಿಯಾಗಿ ಲಂಡನ್‌ನಲ್ಲಿ ಅವರು ತಮ್ಮ ವಾಸ್ತವ್ಯವನ್ನು ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯುಕೆಯ ಗೃಹ ಸಚಿವಾಲಯ ಲಲಿತ್ ಮೋದಿಗೆ ಭಾರತಕ್ಕೆ ಮರಳಿ ಹೋಗುವಂತೆ ನಿರ್ದೇಶನ ನೀಡಿತ್ತು. ಆದರೆ ಭಾರತದ  ಮೋಸ್ಟ್ ವಾಟೆಂಡ್ ಭಯೋತ್ಪಾದಕ ದಾವೂದ್ ಲಲಿತ್ ಮೋದಿಗೆ ಪ್ರಾಣ ಬೆದರಿಕೆ ಒಡ್ಡಿದ್ದು, ಭಾರತೀಯ ಅಧಿಕಾರಿಗಳು ಭೃಷ್ಟ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಮೋದಿಯ ಸುರಕ್ಷತೆ ಕಡಿತಗೊಳಿಸಿದ್ದಾರೆ ಎಂಬ ಕಾರಣಕ್ಕೆ ಅಲ್ಲಿನ ಕೋರ್ಟ್ ಸರಕಾರದ ಆದೇಶವನ್ನು ತಳ್ಳಿ ಹಾಕಿತು.
 
2010ರಲ್ಲಿ ಮೂರನೆಯ ಆವೃತ್ತಿಯ ಐಪಿಎಲ್ ಮುಗಿದ ಬಳಿಕ ಹಣದ ವಂಚನೆ, ಮ್ಯಾಚ್ ಫಿಕ್ಸಿಂಗ್, ಅಕ್ರಮ ಬೆಟ್ಟಿಂಗ್ ಇವೇ ಮುಂತಾದ ಭೃಷ್ಟಾಚಾರದ ಆರೋಪದ ಬಿಸಿಸಿಐ ಲಲಿತ್ ಅವರನ್ನು ಅಮಾನತು ಮಾಡಿತ್ತು.  ಈ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಪೊಲೀಸ್ ರಕ್ಷಣೆ ಹಿಂಪಡೆಯಲಾಗಿತ್ತು. 

ವೆಬ್ದುನಿಯಾವನ್ನು ಓದಿ