ಲಲಿತ್‌ಗೇಟ್: ಸರಕಾರಕ್ಕೆ ಜಿಎಸ್‌ಟಿ ಆಫರ್ ನೀಡಿಲ್ಲ ಎಂದ ಕಾಂಗ್ರೆಸ್

ಬುಧವಾರ, 1 ಜುಲೈ 2015 (21:20 IST)
ಲಲಿತ್‌ಗೇಟ್ ಹಗರಣದಲ್ಲಿ ಆರೋಪಿಗಳಾದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇಯವರನ್ನು ವಜಾಗೊಳಿಸಿದಲ್ಲಿ ಜಿಎಸ್‌ಟಿ ಮಸೂದೆಗೆ ಬೆಂಬಲ ನೀಡಲಾಗುವುದು ಎನ್ನುವ ವರದಿಗಳು ಆಧಾರರಹಿತ ಎಂದು ಕುಚ್ಯೋದ್ಯತನದ್ದು ಎಂದು ಕಾಂಗ್ರೆಸ್ ಟೀಕಿಸಿದೆ. 
 
ಎಐಸಿಸಿ ಸಂಪರ್ಕ ವಿಭಾಗದ ವಕ್ತಾರರಾದ ರಣದೀಪ್ ಸುರ್ಜೆವಾಲಾ ಮಾತನಾಡಿ, ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ವಿರುದ್ಧ ಕ್ರಮಕೈಗೊಳ್ಳುವುದು ಮೋದಿ ಸರಕಾರದ ಆದ್ಯ ಕರ್ತವ್ಯ. ಇದರಲ್ಲಿ ಹೊಂದಾಣಿಕೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಮಾಧ್ಯಮಗಳ ವರದಿಗಳನ್ನು ತಳ್ಳಿಹಾಕಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್, ಕಾಂಗ್ರೆಸ್ ಪಕ್ಷ ಯಾವತ್ತೂ ದೇಶದ ಹಿತಾಸಕ್ತಿ ಬಯಸುತ್ತದೆಯೇ ಹೊರತು ಅಧಿಕಾರರೂಢ ಪಕ್ಷದೊಂದಿಗೆ ಹೊಂದಾಣಿಕೆ ಬಯಸುವುದಿಲ್ಲ ಎಂದು ಹೇಳಿದ್ದಾರೆ.
 
ಲಲಿತ್‌ಗೇಟ್ ಹಗರಣದಲ್ಲಿ ಆರೋಪಿಗಳಾದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇಯವರನ್ನು ವಜಾಗೊಳಿಸಬೇಕು ಎನ್ನುವ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ಕೇಂದ್ರ ಸರಕಾರ ತಳ್ಳಿಹಾಕಿದೆ ಎನ್ನುವ ವರದಿಗಳು ಬಹಿರಂಗವಾಗಿರುವುದು ಉಭಯ ಪಕ್ಷಗಳಿಗೆ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
 
ಜಿಎಸ್‌ಟಿ ಮಸೂದೆ ಮತ್ತು ಭೂಸ್ವಾದೀನ ಮಸೂದೆಯ ಬಗ್ಗೆ ಸಂಸತ್ತಿನ ಅದಿವೇಶನದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲಾಗದು ಎಂದು ಮೋದಿ ಸರಕಾರ ತಿರಸ್ಕರಿಸಿರುವುದಾಗಿ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ