ಮೋದಿ ಡಲ್ ಸ್ಟುಡೆಂಟ್: ಲಾಲು ಪ್ರಸಾದ್ ಯಾದವ್

ಮಂಗಳವಾರ, 1 ಮಾರ್ಚ್ 2016 (17:17 IST)
ಕಪ್ಪು ಹಣ ಸಂಗ್ರಹಿಸಿರುವವರು ಅಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳಲು 4 ತಿಂಗಳ ಕೇಂದ್ರ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿರುವುದನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಟೀಕಿಸಿದ್ದು ಪ್ರಧಾನಿ ಮೋದಿ ಸುಳ್ಳು ಹೇಳುತ್ತಾರೆ ಮತ್ತು ಮೋಸ ಮಾಡುತ್ತಾರೆ ಎಂಬ ಕಾರಣಕ್ಕೆ ಹೊರಹಾಕಲ್ಪಟ್ಟ ಡಲ್ ಸ್ಟುಡೆಂಟ್ ಎಂದು ಅಣಕವಾಡಿದ್ದಾರೆ. 

 
2014ರ ಲೋಕಸಭಾ ಚುನಾವಣೆಗೂ ಮುನ್ನ ಭರವಸೆ ನೀಡಿದನ್ನು ಮೋದಿ ಮರೆತಿದ್ದಾರೆ. ಸಮಾಜದ ಯಾವುದೇ ವಿಭಾಗಕ್ಕೂ ಅವರೇನನ್ನು ನೀಡಿಲ್ಲ. ಮೋದಿ ಸುಳ್ಳು ಹೇಳಿದ್ದಕ್ಕೆ ಮತ್ತು ವಂಚಿಸಿದ್ದಕ್ಕೆ ತರಗತಿಯಿಂದ ಹೊರಹಾಕಲ್ಪಟ್ಟ ಮಂದ ವಿದ್ಯಾರ್ಥಿ ಎಂದು ಅವರು ಆರೋಪಿಸಿದ್ದಾರೆ.  
 
ಅವರು ಪರೀಕ್ಷೆಯಲ್ಲಿ ಮಂದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ ಎಂದ ಲಾಲು, ಕಪ್ಪು ಹಣ ತರುವುದರ ಬದಲು ಕಪ್ಪುಹಣವನ್ನು ಮರಳಿ ತರುವ ಬದಲು,ಕಾಳ ಸಂತೆಕೋರರು ಮತ್ತು ಬಂಡವಾಳಶಾಹಿಗಳಿಗೆ  ಕ್ಷಮಾದಾನ ಯೋಜನೆಯಾಗಿ ಬಜೆಟ್ ಬಂದಿದೆ ಎಂದು ಲಾಲು ಆರೋಪಿಸಿದ್ದಾರೆ. 
 
ಕೃಷಿಪರವಾಗಿ ಮಾಡಿರುವ ಘೋಷಣೆಗಳು ಕೇವಲ ಬಾಯಿಮಾತಿಗಷ್ಟೇ, 36,000 ಕೋಟಿ ಘೋಷಿಸಿರುವುದು ತುಂಬಾ ಸಣ್ಣ ಮೊತ್ತ ಎಂದು ಅವರು ಹೀಗಳೆದಿದ್ದಾರೆ. 

ವೆಬ್ದುನಿಯಾವನ್ನು ಓದಿ