ಮೋದಿ, ಸಂಘದ ವಿರುದ್ಧ ಲಾಲು ವಾಗ್ದಾಳಿ

ಗುರುವಾರ, 8 ಅಕ್ಟೋಬರ್ 2015 (10:43 IST)
ಪ್ರಧಾನಿ ಮೋದಿ ಇಂದು ಮತ್ತು ನಾಳೆ ಬಿಹಾರದಲ್ಲಿ 6 ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪ್ರಧಾನಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. 

ಮೋದಿಯವರು ಮೊದಲಿನಿಂದಲೂ ಬಡವರ ಹಾಗೂ ದಲಿತರ ವಿರೋಧಿಯಾಗಿದ್ದಾರೆ. ಆರ್‌ಎಸ್ಎಸ್ ಮೀಸಲಾತಿ ಹಿಂಪಡೆಯುವ ಕುರಿತು ನೀಡಿರುವ ಹೇಳಿಕೆಗೆ ಅವರು ಮಾತನಾಡುತ್ತಿಲ್ಲ. ಹೀಗಾಗಿ ಅವರು ಸಹ ಮೀಸಲಾತಿ ಹಿಂಪಡೆಯುವುದಕ್ಕೆ ಸಮರ್ಥನೆಯನ್ನು ನೀಡುತ್ತಿದ್ದಾರೆ ಎಂಬುದು ವೇದ್ಯವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
 
ಬಿಜೆಪಿ ಸೈದ್ಧಾಂತಿಕ ಗುರು ಆರ್‌ಎಸ್ಎಸ್ ವಿರುದ್ಧ ಸಹ ಕಿಡಿಕಾರಿದ ಅವರು ಸಂಘ ಸಮಾಜದಲ್ಲಿ ದ್ವೇಷ ಹರಡುವ ಫ್ಯಾಕ್ಟರಿಯಾಗಿದೆ ಎಂದು ಕಿಡಿಕಾರಿದ್ದಾರೆ.
 
ಇಂದಿನಿಂದ ಪ್ರಧಾನಿ ಮೋದಿ ಎರಡು ದಿನಗಳ ಬಿಹಾರ್ ಪ್ರವಾಸ ಕೈಗೊಳ್ಳುತ್ತಿದ್ದು, ಇಂದು 4 ಮತ್ತು ನಾಳೆ ಎರಡು ಚುನಾವಣಾ ಪ್ರಚಾರ ಸಭೆಗಳನ್ನವರು ನಡೆಸಲಿದ್ದಾರೆ.
 
ಭೃಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಈ ಬಾರಿ ಚುನಾವಣಾ ಕಣಕ್ಕಿಳಿಯುತ್ತಿಲ್ಲ. ಆದರೆ ಬಿಜೆಪಿಗೆ ಮಣ್ಣುಮುಕ್ಕಿಸಿ ತಮ್ಮ ಮಹಾ ಮೈತ್ರಿಕೂಟವನ್ನು ಗೆಲ್ಲಿಸಲು ಅವರು ಎಲ್ಲ ರೀತಿಯ ಪ್ರಯತ್ನಗಳನ್ನು ಸಹ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ