ಲಾಲುಗೆ ಯಶಸ್ವಿ ಶಸ್ತ್ರ ಚಿಕಿತ್ಸೆ: ಸ್ಥಿತಿ ಸ್ಥಿರ

ಗುರುವಾರ, 28 ಆಗಸ್ಟ್ 2014 (08:25 IST)
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ರಾಷ್ಟ್ರೀಯ ಜನತಾ ದಳದ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ  6 ಗಂಟೆಗಳ ಧೀರ್ಘ ಅವಧಿಯ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದ್ದು, ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡಿರುವ ಆಸ್ಪತ್ರೆಯ  ಮೂಲಗಳು ತಿಳಿಸಿವೆ.

66 ವರ್ಷದ ಬಿಹಾರದ ನಾಯಕನನ್ನು ಸೋಮವಾರ ಮುಂಬೈ ನ ಏಶಿಯನ್ ಹಾರ್ಟ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 
ಜನಪ್ರಿಯ ಹೃದಯ ಸರ್ಜನ್ ಡಾ. ರಮಾಕಾಂತ ಪಾಂಡಾ ಅವರ ನೇತೃತ್ವದಲ್ಲಿ 20ಜನ ವೈದ್ಯರ ತಂಡ ಲಾಲು ಅವರ ಆಪರೇಶನ್‌ನಲ್ಲಿ ಪಾಲ್ಗೊಂಡಿತ್ತು. 5 ವರ್ಷಗಳ ಮೊದಲು ಪಾಂಡಾ ಮಾಜಿ ಪ್ರಧಾನಿ ಮನಮೋಹನ್ ಅವರ ಶಸ್ತ್ರಚಿಕಿತ್ಸೆ ಮಾಡಿದ್ದರು.  
 
ಈ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯ  ವ್ಯವಸ್ಥಾಪಕ ನಿರ್ದೇಶಕ ಪಾಂಡಾ ಸರ್ಜರಿಯಲ್ಲಿ ಯಾವುದೇ ಸಮಸ್ಯೆಗಳಾಗಲಿಲ್ಲ. ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಸರ್ಜರಿ ಸಂಜೆ ಸುಮಾರು ನಾಲ್ಕು ಗಂಟೆಗಳವರೆಗೆ  ನಡೆಯಿತು. ಅವರ ಮಹಾಪಧಮನಿಯ ಕವಾಟವನ್ನು ಬದಲಿಸಲಾಗಿದೆ ಮತ್ತು ಮಹಾಪಧಮನಿಯನ್ನು ಸರಿಪಡಿಸಲಾಗಿದೆ. ಅಲ್ಲದೇ ಅವರ ಹೃದಯದಲ್ಲಿ  ಮೂರು ಮೀಲಿಮೀಟರ್ ಗಾತ್ರದ ಚಿಕ್ಕ ರಂಧ್ರವು ಕೂಡಾ ಇತ್ತು. ಅದನ್ನು  ಸಹ ಮುಚ್ಚಲಾಗಿದೆ. ಪೂರ್ವ ರೇಲ್ವೇ ಮಂತ್ರಿಯವರಿಗೆ ಸರಾಗ ಉಸಿರಾಟಕ್ಕೆ ಸಹಾಯವಾಗುವಂತೆ ಉಪಕರಣವನ್ನು ಜೋಡಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
 
ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
 
ಸೋಮವಾರ ಬೆಳಗಿನ ಜಾವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರನ್ನು  ಹೃದಯ ಸಂಬಂಧಿ ಪರೀಕ್ಷೆಗಾಗಿ ಮುಂಬೈನ  ಏಶಿಯನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  

ವೆಬ್ದುನಿಯಾವನ್ನು ಓದಿ