ಎಡವಟ್ಟು: ಲಾಲು ಕಿರಿಯ ಮಗನಿಗೆ 26 ವರ್ಷ, ಹಿರಿಯ ಮಗನಿಗೆ 25 ವರ್ಷ!

ಮಂಗಳವಾರ, 6 ಅಕ್ಟೋಬರ್ 2015 (13:20 IST)
ಸದಾ ವಿವಾದಗಳನ್ನು ಸೃಷ್ಟಿಸುತ್ತ ಸುದ್ದಿಯಾಗುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಯಾವುದೇ ಹೇಳಿಕೆಗಳಿಂದ ಅಲ್ಲ. ತಮ್ಮ ಇಬ್ಬರು ಗಂಡು ಮಕ್ಕಳ ವಯಸ್ಸಿಗೆ ಸಂಬಂಧಿಸಿದಂತೆ ಆದ ಎಡವಟ್ಟಿನ ಕಾರಣಕ್ಕೆ ಲಾಲು ಸುದ್ದಿಯಲ್ಲಿದ್ದಾರೆ.

ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ತಮ್ಮ ಜನನ ಪ್ರಮಾಣಪತ್ರ ಮತ್ತು ಜನ್ಮದಿನಾಂಕ ನಮೂದಿಸಬೇಕು.  ತೇಜ್‌ಪ್ರತಾಪ್ ಲಾಲು ಅವರ ಹಿರಿಯ ಮಗನಾಗಿದ್ದು ತೇಜಸ್ವಿ ಕಿರಿಯವರಾಗಿದ್ದಾರೆ. ಆದರೆ ಅವರಿಬ್ಬರು ಚುನಾವಣಾ ಆಯೋಗಕ್ಕೆನೀಡಿರುವ ಮಾಹಿತಿಯ ಪ್ರಕಾರ ಹಿರಿಯವನ ವಯಸ್ಸು 25 ಮತ್ತು ಕಿರಿಯವನ ವಯಸ್ಸು 26. 
 
ಮತದಾರರ ಗುರುತಿನ ಚೀಟಿಯ ದಾಖಲೆಯಲ್ಲಿಯೇ ಈ ವ್ಯತ್ಯಾಸವಾಗಿದ್ದು, ಇದು ಚಿಕ್ಕ ತಾಂತ್ರಿಕ ದೋಷ ಎಂದಿರುವ ಚುನಾವಣಾ ಆಯೋಗ ಈ ಸಂದರ್ಭದಲ್ಲಿ ತಪ್ಪನ್ನು ತಿದ್ದಲಾಗದು ಎಂದಿದ್ದಾರೆ.
 
ಲಾಲು ಪ್ರಸಾದ್ ಯಾದವ್ ಅವರಿಗೆ 9 ಜನ ಮಕ್ಕಳಿದ್ದಾರೆ.

ವೆಬ್ದುನಿಯಾವನ್ನು ಓದಿ